ಚಟ್ನಿ ತಯಾರಿಸುವ ಸಾಮಗ್ರಿಗಳನ್ನು ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಒಂದು ಹಾಳೆಯ ಮೇಲೆ ತುಸು ದಪ್ಪವಾಗಿ ಹಸುರು ಚಟ್ಟಿಯನ್ನು ಸವರಿ ಮೇಲಿನಿಂದ ಇನ್ನೊಂದು ಹಾಳೆ ಒಂದರ ಮೇಲೊಂದು ಇರಿಸಿದ ಬ್ರೆಡ್ಡನ್ನು ಆರು ತುಂಡುಗಳನ್ನಾಗಿ ಕತ್ತರಿಸಿ. ಕಡಲೇಹಿಟ್ಟು, ಅಕ್ಕಿಹಿಟ್ಟು, ಓಮ, ಅರಸಿನಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿರಿ. ನೀರು ಸೇರಿಸಿ ಬಜೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಒಂದು ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಹಿಟ್ಟಿನಲ್ಲಿ ಅದ್ದಿ ತಯಾರಿಸಿದ ಬ್ರೆಡ್ ತುಂಡುಗಳನ್ನು ನಸುಕೆಂಪು ಬಣ್ಣಕ್ಕೆ ಹುರಿದು ತೆಗೆಯಿರಿ. ಮೊಸರಿಗೆ ಉಪ್ಪು, ಸಕ್ಕರೆ ಬೆರೆಸಿ ಹದ ಮಾಡಿರಿ. ಕರಿದಿಟ್ಟ ಬ್ರೆಡ್ ಬಜಿಯಾಗಳನ್ನು ಅಗಲವಾದ ತಟ್ಟೆಯಲ್ಲಿ ಜೋಡಿಸಿ. ಮೇಲಿನಿಂದ ಸುರಿಯಿರಿ. ಮೊಸರು ಬಜಿಯಾಗಳನ್ನು ತೋಯಿಸುವಷ್ಟಿರಬೇಕು. ಮೇಲಿನಿಂದ ಸಿಹಿ-ಹುಳಿ ಚಟ್ಟಿಯನ್ನು ಸಿಂಪಡಿಸಿ. ಉಳಿದ ಹಸುರು ಚಟ್ಟಿಯನ್ನು ಮೇಲಿನಿಂದ ಹಾಕಿ ಅಲಂಕರಿಸಿ. ಕಡೆಗೆ ಕೊತ್ತಂಬರಿಸೊಪ್ಪನ್ನು ಮೇಲಿನಿಂದ ಉದುರಿಸಿ. ಚಾಟ್‌ ಮಸಾಲಾ ಪುಡಿಯನ್ನೂ ಸಿಂಪಡಿಸಿ. ಒಂದು ಗಂಟೆ ನೆನೆಯಲು ಬಿಡಿ. ಬೇಕಾದರೆ ಓಮಕಾಳಿನ ಪುಡಿ ಉದುರಿಸಬಹುದು.