ಕಾಲದ ಕಥನ
ಕವಿತ ಮಹೇಶ್
ಫೆಬ್ರವರಿ ೨೬, ೨೦೨೬
೭ ವೀಕ್ಷಣೆಗಳು
ಸಂತೋಷ್ ಭದ್ರಾವತಿ ಅವರ ಕವನ ಸಂಕಲನ 'ಕಾಲದ ಕಥನ' ದಲ್ಲಿನ ಕವಿತೆಗಳಲ್ಲಿ ಲವಲವಿಕೆ, ಚುರುಕುತನವನ್ನು ಕಂಡು ಖುಷಿ ಅನಿಸುತ್ತದೆ. ಸರಳ ಅನಿಸುವ ಪದಗಳ ಬಳಕೆಯಲ್ಲಿ ಹೊಸತನಮೂ ಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಕವಿ ಸಂತೋಷ್. ಜಗತ್ತಿನ ವೈರುಧ್ಯಗಳನ್ನು ಅಕ್ಷರಗಳಲ್ಲಿ ಸೆರೆಹಿಡಿಯಲು ಯತ್ನಿಸಿರುವುದು ಒಂದು ಸ್ತುತ್ಯರ್ಹ ಪ್ರಯತ್ನ. ಸಂಕೀರ್ಣ ವಸ್ತುವನ್ನು ಹೃಸ್ವವಾಗಿರಿಸುವಲ್ಲೇ ಕವಿ ತನ್ನ ಜಾಣ್ಮೆಯನ್ನು ತೋರಿದ್ದಾರೆ. ಸರಳ ವಾಕ್ಯಗಳ ಮೂಲಕ ಗಂಭೀರ ಅನಿಸುವ ವಿಷಯವನ್ನು ದುಡಿಸಿಕೊಳ್ಳುವ ಕುಶಲತೆ ಈ ಕವಿಯಲ್ಲಿದೆ.
ಪ್ರಕಟಿಸಿದ: ಫೆಬ್ರವರಿ ೨೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬