ಒಂದೊಮ್ಮೆ ನಿನ ನಲ್ಲ ಕೈ ಬಿಟ್ಟರೆ
ನಿನ್ನೊಲವನು ಆತ ಒಲ್ಲೆಂದರೆ
ನೀ ಆಗ ನನ್ನ ಬಳಿ ಬಾರೆ ಗೆಳತಿ
ನನ ಮನಸು ನಿನಗಾಗಿ ತೆರೆದೇ ಇದೆ ಎಂದೆಂದಿಗ
ಒಂದೊಮ್ಮೆ ನಿನ ನಲ್ಲ ಕೈ ಬಿಟ್ಟರೆ
ಈಗಂತೂ ನಿನಗೆ ನನ ಅಗತ್ಯ ಇಲ್ಲ
ನಿನ್ನನ್ನು ಬಯಸೋರು ಸಿಗುತಾರೆ ಬಹಳ
ಈಗಂತೂ ಸುಂದರಿ ನೀ ಇದ್ದೀಯಾ
ಹೂವಂತೆ ಅರಳಿ ಕಂಪ ಬೀರುವೆ
ಕನ್ನಡಿಯು ನಿನ್ನ ಕಂಗೆಡಿಸಿದಾಗ
ಯೌವನವು ನಿನ್ನನ್ನು ತೊರೆದ್ಹೋಗುತಿರಲು
ನೀ ಆಗ ನನ್ನ ಬಳಿ ಬಾರೆ ಗೆಳತಿ
ನನ ಮನೆಯು ತೆರೆದೇ ಇದೆ ನಿನಗಾಗಿ ತಾ
ಒಂದೊಮ್ಮೆ ನಿನ ನಲ್ಲ ಕೈ ಬಿಟ್ಟರೆ
ನಿನ್ನೊಲವನು ಆತ ಒಲ್ಲೆಂದರೆ
ನಿರ್ಬಂಧ ಇರವು ಎಂದೂ ಪ್ರೇಮದಿ
ಪ್ರೀತಿಸಿದೆ ನೀನು ಹಾಕಿ ಶರತ್ತು
ಕತ್ತಲಿಡಲ ಒಂದು ವೇಳೆ ನಿನ ಕಂಗಳು
ಆರತಿಯ ದೀಪ ತಾ ಆರಲು
ನಿನ ಕಂಗಳಲ್ಲೇ ನೀ ಕೆಳ ಬೀಳಲು
ನಿನ್ನದೇ ಕತ್ತಲಲಿ ನೀ ಸಿಲುಕಲು
ನೀ ಆಗ ನನ್ನ ಬಳಿ ಬಾರೆ ಗೆಳತಿ
ಈ ದೀಪ ನಿನಗಾಗಿ ಉರಿದೇ ಇದೇ ಎಂದೆಂದಿಗೂ
ಒಂದೊಮ್ಮೆ ನಿನ ನಲ್ಲ ಕೈ ಬಿಟ್ಟರೆ
ನಿನ್ನೊಲವನು ಆತ ಒಲ್ಲೆಂದರೆ
ನಾನು ಅನುವಾದ ಪೂರ್ತಿಗೊಳಿಸಿದ 26ನೇ ಹಾಡು - ಕೊಯಿಜಬ್ ತುಮ್ಹಾರಾ ಹೃದಯ ತೋಡದೆ
ಶ್ರೀಕಾಂತ ಮಿಶ್ರಿಕೋಟಿ
ಜನವರಿ ೨೯, ೨೦೨೬
೭ ವೀಕ್ಷಣೆಗಳು
ಪ್ರಕಟಿಸಿದ: ಜನವರಿ ೨೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬