'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡನ್ನು ಒಂದೆರಡೇ ಸಾಲು ಅನುವಾದ ಮಾಡಿ 38 ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದವನ್ನು ಮೂಲ ಧಾಟಿಯಲ್ಲಿಯೇ ಮಾಡಿ ಹಂಚಿಕೊಳ್ಳುತ್ತಿದ್ದೇನೆ.   ನಿನ್ನ ವಿನ ಶೂನ್ಯ ನನ್ನ ಮನದಾ ಮಂದಿರ  ಬಾರೆ ಬಾ ಬಾರೆ ಬಾ ಓ ನಲ್ಲೆ ಬಾರೆ ಬಾ    ಬೆಳಗಿನ ಇಬ್ಬನಿ ಮಾಡಿದೆ ತೋಟದಿ ಮೊಗ್ಗುಗಳ ಸಿಂಗಾರವ ಹೂವು ತೋಟವ , ಕಂಪು ಗಾಳಿಯ ತೆರೆಗಳು ದಡವನು ಪ್ರೀತಿಸಿವೆ ನಾನು ಒಂಟಿ ಹಕ್ಕಿಯ ಹಾಗೆ ಹುಡುಕಿದೆ ನಿನ್ನಯ ಗೂಡನು   ಕಾಲದ ನದಿಯು ಹರಿದಿದೆ ಮುಂದಕೆ  ಜನರು ಕೂಡ ಹಾಗೆಯೇ ಆದರೆ ನಾನು ಒಂದೆಡೆ ನಿಂತೆ ನಿನ್ನಯ ದಾರಿಯ ಕಾಯುತ ನನ್ನ ಗೆಳತಿ ಹೇಳು ಎಂದು ಮಧುರ ಮಿಲನ ನನ್ನದು ನಿನ್ನದು