'ಏಕ ಹಸೀನ್ ಶಾಮ ಕೋ ಮೇರಾ ದಿಲ್ ಖೋ ಗಯಾ' ಹಿಂದಿ ಚಿತ್ರಗೀತೆಯ ಪೂರ್ಣ ಅನುವಾದ
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೯, ೨೦೨೬
೮ ವೀಕ್ಷಣೆಗಳು
ಈ ಚಿತ್ರಗೀತೆಯ ಅನುವಾದ ಈಗ ಪೂರ್ಣವಾಗಿದೆ. ಇದಕ್ಕೆ ನಾನು ಕೊಟ್ಟ ಸಂಖ್ಯೆ 575. ಅನುವಾದ ಇಲ್ಲಿದೆ.
ಒಂದು ಸುಂದರ ಸಂಜೆಲಿ
ಕಳೆದುಕೊಂಡೆ ಹೃದಯವ
ಮೊದಲು ಇತ್ತು ನನ್ನದಾಗಿ
ಈಗ ಯಾರದೋ ಆಗಿದೆ
ಬಹುಕಾಲದಿಂದ ಆಸೆ ಇತ್ತು
ಬಾಳಿನಲ್ಲಿ ಯಾರೋ ಬಂದು
ಕತ್ತಲಾದ ಬಾಳಿನಲ್ಲಿ
ಬೆಳಕು ಅವರು ಚೆಲ್ಲಲಿ
ಆಕೆ ಬಂದ ವೇಳೆ
ಬಾಳಿದು ಬೆಳಕಾಯಿತು
ನನ ಎದೆಯ ಬಂಡಿಯನ್ನು
ಈಗ ಯಾರೋ ನಡೆಸುತಿಹರು
ಇಬ್ಬನಿಯಂಥ ಅವಳ ಕಣ್ಣು
ಸ್ವಲ್ಪ ಎಚ್ಚರ ಸ್ವಲ್ಪ ನಿದ್ದೆ
ಅವಳ ಕಂಡೆ
ಲೋಕ ಸುಂದರ ಅನಿಸಿತು
ಪ್ರಕಟಿಸಿದ: ಏಪ್ರಿಲ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬