'ಆನೇವಾಲಾ ಪಲ ಜಾನೆವಾಲಾ ಹೈ' ಹಾಡಿನ ಅನುವಾದ
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೯, ೨೦೨೬
೩ ವೀಕ್ಷಣೆಗಳು
ನಾನು 560 ಸಂಖ್ಯೆಯಿಂದ ಗುರುತಿಸಿದ ಈ ಹಾಡಿನ ಪೂರ್ಣ ಅನುವಾದ ಈಗ ಲಭ್ಯವಿದೆ. ಮೂಲದ ಧಾಟಿಯಲ್ಲೇ ಇದನ್ನು ಹಾಡಬಹುದು.
ಬರಲಿರುವ ಗಳಿಗೆಯು ಹೋಗುವುದು ಖಚಿತ
ಸಾಧ್ಯ ಆದ್ರೆ ನೀವು ಈ ಗಳಿಗೆ ಬದುಕಿ
ಈ ಗಳಿಗೆ ಕಳೆದು ಹೋಗಲಿದೆ
ಒಂದು ಸಲ ನನಗೆ ಸಿಕ್ಕಿತು
ಮುಗ್ಧವಾದ ಒಂದು ಹೂ
ಅರಳುತಲಿ ಹೇಳಿತು ಇದೋ ನಾನು ಹೊರಟೆ
ಒಮ್ಮೆ ಅಲ್ಲೇ ಇತ್ತು
ಅದು ಮರುಗಳಿಗೆ ಇರಲೇ ಇಲ್ಲವೋ
ಈ ಗಳಿಗೆ ಕಳೆದು ಹೋಗಲಿದೆ
ಒಂದು ಸಲ ಗಳಿಗೆಯು ಕಾಲದಿಂದ ಕಳಚಿತು
ಅಲ್ಲೊಂದು ಕತೆಯು ಸಿಕ್ಕಿತು
ಗಳಿಗೆ ಸಿಗಲೇ ಇಲ್ಲ
ಒಮ್ಮೆ ನನ್ನನು ನಗಿಸಿ
ಒಮ್ಮೆ ನನ್ನನು ಅಳಿಸಿ
ಈ ಗಳಿಗೆ ಕಳೆದು ಹೋಗಲಿದೆ
ಪ್ರಕಟಿಸಿದ: ಏಪ್ರಿಲ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬