ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ.
571) ಮೂಲ ಹಾಡು : ಮೈ ತೋ ತುಮ ಸಂಗ ನೈನ ಮಿಲಾ ಕೆ
ಅನುವಾದ:-
ನಾನೋ ನಿನ್ನ ಕಣ್ಣಿಗೆ ಕಣ್ಣನು ಬೆರೆಸಿ
ಸೋತೇ ಹೋದೆನು ಪ್ರಿಯತಮಾ
572) ಮೂಲ ಹಾಡು : ಕಿಯಾ ಹೈ ಪ್ಯಾರ ಜಿಸೆ
ಅನುವಾದ -
ನನ್ನ ಬಾಳಿನಂತೆಯೇ ಯಾರ ಪ್ರೀತಿ ನಾನು ಮಾಡಿದೆನೋ
ಆಕೆ ಭೇಟಿಯಾದಳು ನನ್ನ ಅಪರಿಚಿತೆಯಂತೆ
573 ) ಮೂಲ ಹಾಡು: ದಿಲ ಕೆ ಝರೋಕೋಂಸೆ
ನನ್ನ ಅನುವಾದ: ನನ್ನೆದೆಯ ಗುಡಿಯಲ್ಲಿ ನಿನ್ನನ್ನು ಇರಿಸಿ
ನೆನಪುಗಳ ಹೂಗಳನ್ನು ನಿನ್ನೆಡೆಗೆ ಚೆಲ್ಲಿ
ಮಾಡುವೆನು ನಾ ಅರ್ಚನೆ
ಬೇಸರ ಪಡದಿರು ಓ ನನ್ನ ನಲ್ಲೇ
ನನ್ನ ಪ್ರೀತಿ ನಿನಗೆ ಬೇಡ ಅನಿಸಿದ್ರೆ
ನಿನ್ನನ್ನು ನಾ ದೂರೆನು
ಉಸಿರಲ್ಲಿ ಇರ್ತದೆ ನಿನ್ನಯ ಹೆಸರು
ಬದುಕೆಲ್ಲ ಮಾಡುವೆನು ನಿನ್ನದೆಯೇ ಪೂಜೆ
574) ಮೂಲ ಹಾಡು: ಬಾರ್ ಬಾರ್ ದಿನ್ ಏ ಆ ಮೇ
ನನ್ನ ಅನುವಾದ:
ಮರಳಿ ಮರಳಿ ಈ ದಿನ ಬರಲಿ
ಮರಳಿ ಮರಳಿ ಹಾಡಲಿ ಹೃದಯ
ಇರು ನೀ ಸಾವಿರ ವರುಷ
ಇದೇ ನನ್ನ ಬಯಕೆಯು
ಹ್ಯಾಪಿ ಬರ್ಥ ಡೇ ಟೂ ಯೂ
575) ಮೂಲ ಹಾಡು : ಏಕ್ ಹಸೀನ್ ಶಾಮ್ ಕೋ
ನನ್ನ ಅನುವಾದ : •
ಒಂದು ಸುಂದರ ಸಂಜೆಲಿ
ಕಳೆದುಕೊಂಡೆ ಹೃದಯವ
ಮೊದಲು ಇತ್ತು ನನ್ನದಾಗಿ
ಈಗ ಯಾರದೋ ಆಗಿದೆ
ಬಹುಕಾಲದಿಂದ ಆಸೆ ಇತ್ತು
ಬಾಳಿನಲ್ಲಿ ಯಾರೋ ಬಂದು
ಕತ್ತಲಾದ ಬಾಳಿನಲ್ಲಿ
ಬೆಳಕ ಅವರು ಚೆಲ್ಲಲಿ
ಆಕೆ ಬಂದ ವೇಳೆ
ಬಾಳಿದು ಬೆಳಕಾಗಿ
ನನ್ನ ಎದೆಯ ಬಂಡಿಯನ್ನು
ಈಗ ಯಾರೋ ನಡೆಸುತಿಹರು
ಇಬ್ಬನಿಯಂಥ ಅವಳ ಕಣ್ಣು
ಸ್ವಲ್ಪ ಎಚ್ಚರ ಸ್ವಲ್ಪ ನಿದ್ದೆ
ಅವಳ ಕಂಡೆ
ಲೋಕ ಸುಂದರ ಅನಿಸಿತು
576)ಮೂಲ ಹಾಡು: ಚಾಂದ್ ಫಿರ್ ನಿಕಲಾ
ನನ್ನ ಅನುವಾದ:
ಚಂದ್ರ ಮತ್ತೆ ಬಂದ
ಬರಲಿಲ್ಲ ನೀನು
ಹೃದಯ ಉರಿದು ಹೋಯಿತು
ನಾ ಏನು ಮಾಡಲಿ
577 ) ಮೂಲ ಹಾಡು: ಛೋಟಿ ಛೋಟಿ ಖುಶಿಯಾಂ
ನನ್ನ ಅನುವಾದ :
ಸಣ್ಣ ಸಣ್ಣ ಖುಷಿಯಲಿ
ಕಾಲ ಕಳೆದಿಹೆವು
ಜತೆ ಜತೆ ಕಂಡು
ಬಾಳ ಬಣ್ಣವನು
ಸಂತೋಷದ ಗಳಿಗೆ ತಾ
ಕಳೆಯದೆ ಇರಲಿ
ಬದುಕೋಣ ನಾವು
ಪ್ರತೀ ಗಳಿಗೆ
ನಾಳೆಯನ್ನು ಯಾರು ಕಂಡಿಹರು
ಉಸುಕಿನ ರೀತಿ ಜಾರುವುದು ಬದುಕು
ಈ ಸಣ್ಣ ಋತುವು ಕಳೆಯದೆ ಇರಲಿ
ಈ ಸಣ್ಣ ಆಟಿಗೆ ಬಲು ಚೆಂದ
ತಾ ಒಡೆಯದೆ ಇರಲಿ
ಹೀಗೆ ನಡಿ ನಡಿ
ನಾಳೆಯನ್ನು ಯಾರು ಕಂಡಿಹರು
ಸಣ್ಣ ಸಣ್ಣ ಖುಷಿಯಲಿ
ಕಾಲ ಕಳೆದಿಹೆವು
ಜತೆ ಜತೆ ಕಂಡು
ಬಾಳ ಬಣ್ಣವನು
578 ) ಮೂಲ ಹಾಡು: ಆಂಖೋ ಮೇ ಕ್ಯಾ
ಚೆಹರಾ ತೇರಾ (ಪೆಹಚಾನ್ ಚಿತ್ರದ್ದು)
ನನ್ನ ಅನುವಾದ :
ಕಣ್ಣಲ್ಲಿ ಏನಿದೆ
ನಿನ್ನ ಮುಖ
ಎದೆಯಲ್ಲಿ ಏನಿದೆ
ನಿನ್ನ ಎದೆ ಬಡಿತ
ನನ್ನ ತುಟಿಯಲ್ಲಿ
ನಿನ್ನದೆ ಮಾತು
ಅಷ್ಟೊಂದು ಸುಲಭ
ರಾತ್ರಿ ಕಳೆಯೋಲ್ಲ
ನಿನಗಾಗಿಯೇ
ನನ್ನ ಪ್ರೀತಿಯು
579 ) ಮೂಲ ಹಾಡು: ದುನಿಯಾ ಮೆ ಹಮ್ ಆಯೆ ಹೈತೋ
ನನ್ನ ಅನುವಾದ :
ಈ ಬೂಮಿ ಮೇಲೆ ಬಂದ ಮೇಲೆ
ನಾವು ಬದುಕಬೇಕಿದೆ
ಬದುಕು ವಿಷವಾದರೆ
ಅದ ಕುಡಿಯಬೇಕಿದೆ
580 ) ಮೂಲ ಹಾಡು: ಯಾದ ಸತಾಯೆ ಬಿರಹಾಕಿ ಮೋಹೆ
ನನ್ನ ಅನುವಾದ :
ಕಾಡಿದೆ ನನ್ನ ರಾಮನ ವಿರಹ
ಅವನಿಲ್ಲದೆ ನಿಲ್ಲದು ನನ್ನ ಮನ
ಗುಡುಗಲು ಮೋಡ ಮಿಂಚಲು ಮಿಂಚು
ನನ್ನ ಮನವು ಗಾಬರಿಗೊಂಡಿತು
ಶ್ರಾವಣ ಬಂತು ಅವ ಬರಲೇ ಇಲ್ಲ
ಅವನೇಕೆ ಮನವ ಉರಿಸಿಹ ನನ್ನ
----..
ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 58ನೇ ಕಂತು
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೯, ೨೦೨೬
೧೦ ವೀಕ್ಷಣೆಗಳು
ಪ್ರಕಟಿಸಿದ: ಏಪ್ರಿಲ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬