ಈ ಹಿಂದೆ ನಾನು ಚರಿತ್ರಹೀನ್ ಈ ಚಿತ್ರದ 'ದಿಲ್ ಸೇ ದಿಲ್ ಮಿಲನೇ ಕಾ ಕೋಯಿ ಕಾರಣ್ ಹೋಗಾ ' ಈ ಹಾಡಿನ ಅದೇ ಧಾಟಿಯಲ್ಲಿನ ಒಂದೆರಡೇ ಸಾಲು ಅನುವಾದವನ್ನು ಬಹುಶಃ 80ನೇ ಸಂಖ್ಯೆ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಆ ಹಾಡಿನ ಸಂಪೂರ್ಣ ಅನುವಾದ ಮಾಡಿ ಇಲ್ಲಿ ಕೊಟ್ಟಿದ್ದೇನೆ.     ಎರಡು ಹೃದಯ ಸೇರಲು ಏನೋ ಕಾರಣ ಬೇಕು ಏನೂ ಕಾರಣ ಇಲ್ಲದೆ ಇಲ್ಲಿ ಏನೂ ಆಗೋದಿಲ್ಲ ನೋಡಿದ್ರೆ ಹಂಗೆ ನಮಗೆ ಪರಿಚಯ ಏನೂ ಇಲ್ಲ ನೋಡೋರು ಹೇಳಬಹುದು ನಾವು ಹಳೆಯ ಪ್ರೇಮಿ ಏನೋ ಇದೆ ನನ್ನಲ್ಲಿ ಮತ್ತು ನಿನ್ನಲ್ಲಿ ಇಲ್ದಿದ್ರೆ ಇರತಿತ್ತೆ ಈ ಹೊತ್ತು  ಈ ಹೂ ಮಳೆಯು ಹೀಗೆ     ಪ್ರೇಮ ಇದೆಯೋ, ಇಲ್ಲವೋ ನಮ್ಮಲಿ  ಎಂಬ ಬಗ್ಗೆ ಯಾವ ಸಂದೇಹವಿಲ್ಲ ಅರೆ ಎರಡೇ ಭೇಟಿಯಲ್ಲಿ ಈ ಕಣ್ಣು ನಿದ್ದೆ ಮಾಡದಾದವು ಹೀಗೆ ಹಗಲು ಹೋದವು ಹೀಗೆ ರಾತ್ರಿ ಕಳೆದವು ಕಣ್ಗೆ ನಿದ್ದೆ ಬಾರದಾಯಿತು   ಅರಿಯೆ ಎಲ್ಲಿಂದ ಬಂದೆ ನೀನು ಅರಿಯೆ ಎಲ್ಲಿಂದ ಬಂದೆ ನಾನು ಅರೆ ಅರಿಯೆ ನೀನು ಅರಿಯೆ ನಾನು  ಹೇಗೆ ಕಲೆತವು ನಮ್ಮ ಹೃದಯ ಬಹುಶಃ ನಮ್ಮಿಬ್ಬರದೂ ಒಂದೇ ಬಾಳದಾರಿ ಇರಬೌದು ಇಲ್ದಿದ್ರೆ ನಮ್ಮ ಭೇಟಿ ಹೀಗೆ ಆಗುತಿತ್ತೆ