'ಜಿಂದಗೀ ಜಬ್ ಭೀ ತೇರಿ ಬಜ್ಮ ಮೆ' ಹಾಡಿನ ಪೂರ್ತಿ ಅನುವಾದ
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೯, ೨೦೨೬
೪ ವೀಕ್ಷಣೆಗಳು
ಉಮರಾವ್ ಜಾನ್ ಚಿತ್ರದ ಈ ಹಾಡನ್ನು (ನನ್ನ ಸಂಖ್ಯೆ 553) ಈಗ ಪೂರ್ತಿ ಅನುವಾದಿಸಿದ್ದೇನೆ. ಇದನ್ನು ಮೂಲ ಧಾಟಿಯಲ್ಲಿ ಹಾಡಿಕೊಳ್ಳಬಹುದು.
ಬದುಕಲಿ ಒದಗಲು ನಿನ್ನ ಜೊತೆ
ಈ ಭೂಮಿ ಚಂದ್ರಗು ಚೆನ್ನ ಅನಿಸುವುದು
ಹೂವು ತಾ ಬೀರುವವು ಕಂಪನು ಬಾಳ ದಾರಿಯಲಿ
ಸೂರ್ಯ ಮುಳುಗೆ ನಿನ್ನ ದನಿಯು ಕರೆವುದು ನನ್ನನು
ಈ ಭೂಮಿ ಚಂದ್ರಗು ಚೆನ್ನ ಅನಿಸುವುದು
ಪ್ರತಿ ಮಿಲನ ಕೊನೆಯಾಗುವುದೇಕೆ ಬೇರ್ಪಡೆಯಲಿ
ಈಗ ಪ್ರತಿಗಳಿಗೆ ಇದೇ ಪ್ರಶ್ನೆ ನನ್ನ ಕಾಡುವುದು
ಈ ಭೂಮಿ ಚಂದ್ರಗು ಚೆನ್ನ ಅನಿಸುವುದು
ಪ್ರಕಟಿಸಿದ: ಏಪ್ರಿಲ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬