ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 401) ಹಾಡು : ಹೈ ಅಪನಾ ದಿಲ ತೋ ಆವಾರಾ ನನ್ನ ಅನುವಾದ: ನನ್ನ ಹೃದಯ ಒಂದು ರೀತಿ ಅರಿಯೆ ಯಾರನ್ನು ಒಲಿಯುವುದು 402) ಹಾಡು : ಯೂ ತೋ ಹಮನೆ ಲಾಖ ಹಸೀನಾ ನನ್ನ ಅನುವಾದ:  ನೋಡಿಹೆ ನಾನು ಎಷ್ಟೋ ಜನರ ನಿನ್ನ ಹಾಗೆ ಯಾರಿಲ್ಲ 403) ಹಾಡು : ಸೂರಜ ಹುವಾ ಮಧ್ಯಮ ನನ್ನ ಅನುವಾದ: ಸೂರ್ಯ ತಂಪಾದ ಚಂದ್ರ ಸುಡತೊಡಗಿದ ಆಗಸದಿ ಯಾಕೋ ಹನಿ ಒಡೆಯಿತು ಎದೆ ಬಡಿತ ಏರಿತು ಉಸಿರು ನಿಂತಾಯಿತು ಓ ನಲ್ಲ ಇದು ನನ ಮೊದಲ ಪ್ರೀತಿಯೇ? 404) ಹಾಡು : ದಿಲ ಕಾ ರಿಶ್ತಾ ನನ್ನ ಅನುವಾದ: ಹೃದಯದ ಬಂಧ ಅದು ಬಲು ಚೆಂದ ಎಷ್ಟು ಅಮಾಯಕ ಈ ನನ್ನ ಹೃದಯ 405) ಹಾಡು : ಕಹೋ ನಾ ಪ್ಯಾರ ಹೈ ನನ್ನ ಅನುವಾದ: ನನ್ನ ಹೃದಯ ಈ ಮಾತನ್ನ ಹೇಳೋಕೆ ಬಯಸಿದೆ ಹೇಳಲ್ಲ ಪ್ರೀತಿ ಇದೆ ನನ್ನಲ್ಲಿ ಪ್ರೀತಿ ಇದೆ ಹಾಂ ನಿನ್ನಲ್ಲಿ ಪ್ರೀತಿ ಇದೆ 406) ಹಾಡು : ಪ್ಯಾರ್ ಕಾ ಕಾಗಜ್ ಪೆ ನನ್ನ ಅನುವಾದ: ಪ್ರೀತಿಯ ಕಾಗದದೆ ಹೃದಯದ ಪೆನ್ನಿಂದ ಮೊದಲಸಲ ವಂದಿಸುತ ನಾನು ಅವನಿಗೆ ಪತ್ರ ಬರೆದೆ 407) ಹಾಡು : ಬನ ಕೇ ಕಿತಾಬ್ ತೇರಿ ನನ್ನ ಅನುವಾದ: ಪುಸ್ತಕವಾಗಿ ನಾನು ನಿನ್ನ ಎದೆಗೆ ಒರಗುವೆ ಹೃದಯಕೆ ಹತ್ತಿರವಾಗಿ ಎದೆ ಬಡಿತ ಎಣಿಸುವೆ 408) ಹಾಡು : ಫಿರ್ ಅಜನಬಿ ಬನ್ ಜಾವೋ ತುಮ್ ನನ್ನ ಅನುವಾದ:  ಮತ್ತೆ ಅಪರಿಚಿತೆ ಆಗಿ ಬಿಡು ನೀ ಮತ್ತೆ ಗೆಳೆತನ ನಾ ಮಾಡುವೆ ಆಗ ಈ ತಪ್ಪನು ನಾ ಮಾಡೆನು ಯಾವುದರ ಶಿಕ್ಷೆಯು ಈ ದುಃಖವು 409) ಹಾಡು : ಗಂಗಾ ಮೇ ಡೂಬಾ ನನ್ನ ಅನುವಾದ:  ಗಂಗೆಯಲಿ ಮುಳುಗಿಲ್ಲ ಜಮುನೆಯಲ್ಲಿ ಅಲ್ಲ ಮುಳುಗಿ ಹೋಯ್ತು ಮನ ನಿನ್ನ ಕಣ್ಣಲಿ  410) ಹಾಡು : ಮುಝೆ ಠಂಡ್ ಲಗ್ ರಹೀ ಹೈ ನನ್ನ ಅನುವಾದ:  ನಂಗೆ ಚಳಿ ಆಗುತಿದೆ ದೂರ ಹೋಗಬೇಡವೆ ಹೋಗಬೇಡವೆ ಹೋಗಬೇಡ ಹೋಗಬೇಡ ಎದೆಯಲ್ಲಿ ಬೆಂಕಿ ಹೊತ್ತಿದೆ ನೀ ಸನಿಹ ಬರಬೇಡ ನೀ ಬರಬೇಡ ನೀ ಬರಬೇಡ