ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 44
ಶ್ರೀಕಾಂತ ಮಿಶ್ರಿಕೋಟಿ
ಅಕ್ಟೋಬರ್ ೨೫, ೨೦೨೫
೮ ವೀಕ್ಷಣೆಗಳು
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
421) ಹಾಡು : ಆಪ್ ಭೀ ಆಯಿಯೆ
ನನ್ನ ಅನುವಾದ:
ನೀವುನೂ ಬನ್ನಿರಿ
ನನ್ನನು ಕರೆಯುತಲೂ ಇರಿ
ಗೆಳೆತನ ಅಪರಾಧವಲ್ಲ
ಗೆಳೆಯನಾಗಿ ಮಾಡಿಕೊಳ್ಳಿ
ವಿಷವನು ಕುಡಿಯುತಿರಿ
ಅಮೃತವ ಹಂಚುತಿರಿ
ಗಾಯವನ್ನು ತೋರಿಸುತ
ಹಾಡನು ಹಾಡುತಿರಿ
422) ಹಾಡು : ಕಹತೀ ಹೈ ದಿಲ್ ಕೀ ಲಗೀ
ನನ್ನ ಅನುವಾದ:
ಹೇಳುತದೆ ನನ್ನ ಹೃದಯ
ಆಗು ನೀ ನನ್ನವಳು
ಹಾಂ ಹಾಂ ಹಾಂ
ನಾನು ಮರುಳು ನಿನಗೆ
ಹೇಳಿದರು ಏನೂ ನೆಪವ ಓ ನಲ್ಲೆ
ನನ್ನನ್ನು ಮುಟ್ಟದಿರು
ಪ್ರೀತಿಯಲ್ಲಿ ಕಳೆದು ಹೋಗದಿರು
ನಿನ್ನ ಹಠವು ಒಳ್ಳೆಯದಲ್ಲ
ಹೇಗೆ ತಿಳಿ ಹೇಳಲಿ ನಲ್ಲ ನಿನಗೆ
423) ಹಾಡು : ತೂ ಪ್ಯಾರ ಕಾ ಸಾಗರ್ ಹೈ
ನನ್ನ ಅನುವಾದ:
ನೀ ಪ್ರೀತಿಯ ಸಾಗರವೇ
ನಿನ್ನ ಒಂದು ಹನಿ ಪ್ರೀತಿಗೆ ಕಾದಿರುವೆ
424) ಹಾಡು : ತೇರೆ ನಾಮ್ ಹಮನೆ ಕಿಯಾ ಹೈ
ನನ್ನ ಅನುವಾದ:
ನಿನ್ನ ಹೆಸರಿಗೆ
ನಾ ಮಾಡಿರುವೆ
ನನ್ನ ಇಡೀ ಜೀವನವ
ನಲ್ಲೆ ಇಡೀ ಜೀವನವ
ಬಹಳ ಪ್ರೀತಿ ಮಾಡುವೆ ನಿನ್ನನ್ನ
ನೀನೇ ನನ್ನ ಪ್ರೀತೀ ನಲ್ಲೆ
425) ಹಾಡು : (ಯಹ್ ಮೌಸಂ ಭೀ ಗಯಾ ಎಂದು ಶುರು ಆಗುವ ಹಾಡು) ಅಬ ತೋ ಕಹೋ
ನನ್ನ ಅನುವಾದ:
ಹೇಳೀಗ ನನ ನಲ್ಲ
ಯಾವಾಗ ನೀ ಸಿಗುವೆ
ಸಿಗುವೆನು ನಾ ನಾ ನಾ
ಶ್ರಾವಣ ಬಂದಾಗ
426) ಹಾಡು : ಖಶಬೂ ತುಮ್ಹಾರೇ ಪ್ಯಾರ್ ಕೀ
ನನ್ನ ಅನುವಾದ:
ನಿನ್ನ ಪ್ರೇಮದ ಸುವಾಸನೆಯು
ಬರುವುದು ಗಾಳಿಯಲಿ
ಕೇಳಿರುವೆ ಬರುವೆ ನೀ
ಈ ಸಲ ಶ್ರಾವಣದಿ
427) ಹಾಡು : ಮನ್ ತಡಪತ ಹರಿ ದರುಶನ್ ಕೊ ಆಜ್
ನನ್ನ ಅನುವಾದ:
ಮನ ಬಯಸಿದೆ ಹರಿ ದರುಶನವ ಇಂದು
428) ಹಾಡು : ಮನ ಡೋಲೆ ಮೇರಾ ತನ ಡೋಲೆ
ನನ್ನ ಅನುವಾದ:
ಮನ ತೂಗಿ ನನ್ನ ತನು ತೂಗಿ
ಹೃದಯದ ನೆಮ್ಮದಿ ಕದಡಿದೆ
ಯಾರದು ಈ ಪುಂಗಿ?
429) ಹಾಡು : ಯೆ ಜಿಂದಗೀ ಉಸೀ ಕೀ ಹೈ
ನನ್ನ ಅನುವಾದ:
ಈ ಬದುಕು ಆಗಿದೆ ಅವರದು
ಆತ ಈಗ ಇನ್ನಾರದೋ
ಪ್ರೇಮದಲ್ಲಿ ಕಳೆದು ಹೋದನು
430) ಹಾಡು : ಯಹ್ ವಾದಾ ಕಿಯಾ ಹಮನೆ
ನನ್ನ ಅನುವಾದ:
ಈ ಆಣೆ ಮಾಡಿರುವೆ
ಸಿಗುತ್ತೀನಿ ಪ್ರತಿ ಜನುಮ
ಪ್ರತಿ ಜನುಮ ಕೇಳು ನಲ್ಲೆ
ಬಯಸುತೀನಿ ನಿನ್ನ ಸಂಗ
ಪ್ರಕಟಿಸಿದ: ಅಕ್ಟೋಬರ್ ೨೫, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬