ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 45
ಶ್ರೀಕಾಂತ ಮಿಶ್ರಿಕೋಟಿ
ಅಕ್ಟೋಬರ್ ೨೯, ೨೦೨೫
೭ ವೀಕ್ಷಣೆಗಳು
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
431) ಹಾಡು : ತೂ ಹಿ ಮೇರೆ ಮಂದಿರ
ನನ್ನ ಅನುವಾದ:
ನೀನೆ ನನ್ನ ಮಂದಿರ
ನೀನೆ ನನ್ನ ಪೂಜೆ
ನೀನೆ ದೇವತೆ ನನಗೆ
ನನ್ನ ಕಣ್ಣಿನಿಂದ ನೋಡೋರು ತಿಳಿದಾರು
ನೀ ನನಗೇನು ಅಂತ
432) ಹಾಡು : ಜಿಧರ್ ದೇಖೂ ತೇರಿ ತಸ್ವೀರ್
ನನ್ನ ಅನುವಾದ:
ಎಲ್ಲೇ ನೋಡಲಿ ನಿನ್ನ ಚಿತ್ರವೇ
ಕಂಡುಬರುವುದು
433) ಹಾಡು : ತೇರೆ ಮೇರೆ ಬೀಚ್ ಮೇ
ನನ್ನ ಅನುವಾದ:
ನಿನ್ನ ನನ್ನ ನಡುವೆ
ಇರುವುದೇನು ಈ ಬಂಧ
ನಾ ಅರಿಯೆ
ನಾನಂತೂ ಅರಿಯೆ
ನೀನು ಕೂಡ ಅರಿಯೆ
434) ಹಾಡು : ದೀವಾನೋ ಸೆ ಏ ಮತ ಪೂಛೋ
ನನ್ನ ಅನುವಾದ:
ಮರುಳರು ನೀವು ಕೇಳಲೇಬೇಡಿ
ಅವರಿಗೆ ಏನು ಆಗಿದೆ ಅಂತ
ದೇವರು ಮಾಡಿದ ಮಾನವನ
ಈ ಮಾನವ ಪ್ರೀತಿಯ ಮಾಡಿದನು
ಮೇಲೆ ಕುಳಿತ ದೇವರು ಅರಿಯ
ಮನುಜರಿಗೆ ಏನು ಆಗಿದೆ ಅಂತ
435) ಹಾಡು : ಯಾದ್ ತೇರೀ ಆಯೇಗೀ
ನನ್ನ ಅನುವಾದ:
ನಿನ್ನ ನೆನಪು ಬರುತದೆ
ನನಗೆ ಬಹಳ ಕಾಡುವುದು
436) ಹಾಡು : ನೈನೋ ಮೇ ಸಜನಾ
ನನ್ನ ಅನುವಾದ:
ಕಣ್ಣಲ್ಲಿ ಕನಸು
ಕನಸಲ್ಲಿ ಇನಿಯಾ
ಇನಿಯನ ಮೇಲೆ ಮನಸಾಯಿತು
ಏಕೆ
ಇನಿಯನ ಮೇಲೆ ಮನಸಾಯಿತು
437) ಹಾಡು : ಶಾಯದ್ ಮೇರೀ ಶಾದೀ ಕಾ ಖಯಾಲ್
ನನ್ನ ಅನುವಾದ:
ಬಹುಶಃ ನನ್ನ ಮದುವೆ ವಿಷಯ
ಮನಸಲ್ಲಿ ಬಂದಿಹುದು
ಅದಕ್ಕೆಂದೆ ನನ್ನ ತಾಯಿ ನಿನ್ನ
ಚಹಕೆಂದು ಕರೆದಾಳೆ
438) ಹಾಡು : ಜಿಂದಗಿ ಪ್ಯಾರ್ ಕಾ ಗೀತ್ ಹೈ
ನನ್ನ ಅನುವಾದ
ಬದುಕಿದು ಪ್ರೇಮದ ಗೀತೆಯೇ
ಇದು ಪ್ರತಿ ಹೃದಯವು ಹಾಡಲೇಬೇಕಿದೆ
439) ಹಾಡು : ಸರ್ದಿ ಖಾಸೀ ನ ಮಲೇರಿಯಾ ಹುವಾ
ನನ್ನ ಅನುವಾದ:
ಕೆಮ್ಮಲ್ಲ ನೆಗಡಿ ಅಲ್ಲ
ಮಲೇರಿಯಾ ಅಲ್ಲವು
ಕಥೆ ಮುಗಿಯಿತು ನನ್ನದು
ನನಗೆ ಲವ್ ಲವ್ ಲವ್
ಲವೇರಿಯಾ ಆಗಿದೆ
440) ಹಾಡು : ಮೇರೆ ಹಾಥ್ ಮೇ
ನನ್ನ ಅನುವಾದ:
ನನ್ನ ಕೈಯಲ್ಲಿ ನಿನ್ನ ಕೈ ಇದೆ
ಇಡೀ ಸ್ವರ್ಗವು ನನ್ನ ಕೈಲಿದೆ
ಪ್ರಕಟಿಸಿದ: ಅಕ್ಟೋಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬