ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 46
ಶ್ರೀಕಾಂತ ಮಿಶ್ರಿಕೋಟಿ
ಅಕ್ಟೋಬರ್ ೨೯, ೨೦೨೫
೭ ವೀಕ್ಷಣೆಗಳು
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
441) ಹಾಡು : ಅಂಗ್ರೆಜಿ ಮೆ ಕಹತೆ ಹೈ ಕಿ
ನನ್ನ ಅನುವಾದ:
ಇಂಗ್ಲೀಷಲ್ಲಿ ಹೇಳುತ್ತಾರೆ - ಐ ಲವ್ ಯೂ
ಗುಜರಾತೀಲಿ ಹೇಳುತ್ತಾರೆ - ತನ್ನೇ ಪ್ರೇಮ್ ಕರೂಂ ಛೂ
ಬಂಗಾಲೀಲಿ ಹೇಳುತ್ತಾರೆ - ಅಮೀ ತುಮಾಕೆ ಬಾಲೋ ಭಾಷಿ
ಮತ್ತು ಪಂಜಾಬೀಲಿ- ತೇರಿತೋ
ತೇರೆ ಬಿನ್ ಮರ ಜಾಣಾ
ಮೈ ತನ್ನು ಪ್ಯಾರ್ ಕರಣಾ
ತೇರೆ ಜಿಯ್ಯೋ ನಯ್ಯೋ ಲಬಡೀ
ಓ ಸಾಥೀ ಹೋ
442) ಹಾಡು : ಜಾಯೆ ತೋ ಜಾಯೆ ಕಹಾಂ
ನನ್ನ ಅನುವಾದ:
ಹೋಗಲಿ ನಾ ಎಲ್ಲಿಗೆ
ಅರಿವರು ಯಾರು ಇಲ್ಲಿ
ದುಃಖ ಭರಿತ ಹೃದಯದ ನುಡಿಯ
443) ಹಾಡು : ಮೇರಿ ಯಾದ್ ಮೇ ತುಂ
ನನ್ನ ಅನುವಾದ:
ನನ್ನ ನೆನಪಲ್ಲಿ ನೀನು
ಸುರಿಸಬೇಡ ಕಂಬನಿ
ಉರಿಸಬೇಡ ಹೃದಯ
ಮರೆತುಬಿಡು ನನ್ನ
444) ಹಾಡು : ಕ್ಯಾ ಕರತೇ ಥೇ ಸಾಜನಾ
ನನ್ನ ಅನುವಾದ:
ಮಾಡ್ತಾ ಇದ್ದೆ ಏನು
ನನ್ನಿಂದ ದೂರ ಇದ್ದು
ನಾನು ವಿರಹದಿ ಒಬ್ಬಳೇ
ನನ್ನೊಳಗೆ ಅಳುತ್ ಇದ್ದೆನು
ಏನು ಹೇಳಲಿ ನಲ್ಲೆಯೇ
ನಿನ್ನಿಂದ ದೂರ ಇದ್ದು
ದೇವರ ಪ್ರಾರ್ಥನೆಯಲೆಲ್ಲ
ನಿನ್ನನ್ನು ಬೇಡ್ತಾ ಇದ್ದೆನು
445) ಹಾಡು : ದುನಿಯಾ ಮೇ ಕಿತನಾ ಗಂ ಹೈ
ನನ್ನ ಅನುವಾದ:
ಲೋಕದಿ ಎನಿತು ದುಃಖ ಇಹುದು
ನನ್ನ ದುಃಖ ಎನಿತು ಕಿರಿದು
ಜನರ ದುಃಖ ನೋಡುತ ನಾನು
ನನ್ನ ದುಃಖವ ಮರೆತೇ ಬಿಟ್ಟೆನು
446) ಹಾಡು : ಪ್ರೇಮ್ ಕಹಾನೀ ಮೇ ಇಕ ಲಡಕಾ
ನನ್ನ ಅನುವಾದ:
ಪ್ರೇಮ ಕಥೆಯಲ್ಲಿ ಒಬ್ಬ ಹುಡುಗ ಇರುತಾನೆ
ಒಬ್ಬ ಹುಡುಗಿ ಇರುತಾಳೆ
ಒಮ್ಮೆ ಇಬ್ಬರೂ ನಗುತಾರೆ
ಒಮ್ಮೆ ಇಬ್ಬರು ಅಳುತಾರೆ
447) ಹಾಡು : ತೇರೆ ಚೆಹರೆ ಮೇ ವೋ ಜಾದೂ ಹೈ
ನನ್ನ ಅನುವಾದ:
ನಿನ್ನಯ ಮೊಗದಿ ಆ ಜಾದೂ ಇದೆ
ನನ್ನ ನಿನ್ನೆಡೆ ಸೆಳೆವುದು
ಹೋಗುವುದಿರಲು ಬೇರೆಯ ಕಡೆಗೆ
ಬರುವೆನು ನಾ ನಿನ್ನ ಕಡೆಗೆ
448) ಹಾಡು : ಪಗ್ ಗುಂಗರೂ ಬಾಂಧ್
ನನ್ನ ಅನುವಾದ:
ಗೆಜ್ಜೆ ಕಟ್ಟಿ ಕಾಲಿಗೆ
ಕುಣಿದಳು ಮೀರೆ ಅಂದು
ನಾನು ಕುಣಿದೆ
ಗೆಜ್ಜೆ ಇಲ್ಲದೆ
449) ಹಾಡು : ಯಾದ್ ಮೇ ತೇರಿ ಜಾಗ ಜಾಗ ಕೆ ಹಂ
ನನ್ನ ಅನುವಾದ:
ನಿನ್ನ ನೆನಪು ನನ್ನ ಮಲಗಲು ಬಿಡದೆ
ರಾತ್ರಿಯೆಲ್ಲ ಹೊರಳುತಾ ಇದ್ದೆ
450) ಹಾಡು : ಚಿಟ್ಠೀ ಆಯೀ ಹೈ ವತನ್ ಸೆ
ನನ್ನ ಅನುವಾದ:
ಪತ್ರ ಬಂದೈತೆ
ಊರಿಂದ
ಪತ್ರ ಬಂದೈತೆ
ಊರ ಬಿಟ್ಟಿರೋ ನಮಗೆ
ಭಾಳ ದಿನದ ಮ್ಯಾಲೆ
ಊರಿನ ನೆನಪು ಬಂದೈತೆ
ಪ್ರಕಟಿಸಿದ: ಅಕ್ಟೋಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬