ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
451) ಹಾಡು : ತೇರೆ ನಾಮ್ ಹಮನೆ ಕಿಯಾ ಹೈ
ನನ್ನ ಅನುವಾದ:
ನಾ ಮಾಡಿಹೆ ನಿನ ಹೆಸರಿಗೆ
ನನ ಇಡೀ ಬದುಕನ್ನ ಓ ನಲ್ಲೆಯೇ, ಹೋ
ಬಹಳ ಪ್ರೀತಿ ನಿನ್ನ ಮಾಡುವ ನಾನು
ನೀನೇ ನನ್ನ ಪ್ರೀತಿ ನಲ್ಲೇ
452) ಹಾಡು : ಏ ಇಶ್ಕ್ ಹಮೇ ಬರಬಾದ ನ ಕರ
ನನ್ನ ಅನುವಾದ:
ಎಲೆ ಪ್ರೀತಿಯೇ
ಹಾಳುಗೆಡವಲು ಬೇಡ ನನ್ನನು
ಹಾಳುಗೆಡವಲು ಬೇಡ ನನ್ನನು
453) ಹಾಡು : ಜಾನೆ ಕ್ಯೂ ಲೋಗ ಮೊಹಬ್ಬತ್ ಕಿಯಾ ಕರತೇ ಹೈಂ
ನನ್ನ ಅನುವಾದ:
ಈ ಲೋಕದಲ್ಲಿ
ಈ ಪ್ರೇಮದಲ್ಲಿ
ಎಷ್ಟು ಮನ ಒಡೆದವು
ಎಷ್ಟು ಮನೆ ಒಡೆದವು
ಅರಿಯೆ ಜನರು
ಏಕೆ ಪ್ರೀತಿ ಮಾಡುವರು
454) ಹಾಡು : ಸುನಾ ಥಾ ವೋ ಆಯೇOಗೆ
ನನ್ನ ಅನುವಾದ:
ಕೇಳಿದ್ದೆ ನಾನು ಬರುತಾಳೆ ಇಲ್ಲಿ
ಕೇಳಿದ್ದೆ ನಾನು ಸಿಗುತಾಳೆ ಇಲ್ಲಿ
ಕೇಳಿದ್ದೆ ನಾನು ಬರುತಾಳೆ ಇಲ್ಲಿ
ಕೇಳಿದ್ದೆ ನಾನು ಸಿಗುತಾಳೆ ಇಲ್ಲಿ
ನಮಗೇನು ಗೊತ್ತು
ನಮಗೆಲ್ಲಿ ಸುದ್ದಿ
ಇದೂ ಆಗೋದಲ್ಲ
ಅದೂ ಆಗೋದಲ್ಲ
ಕೇಳಿದ್ದೆ ನಾನು ಬರುತಾಳೆ ಇಲ್ಲಿ
455) ಹಾಡು : ಕಹೀಂ ದೂರ ಜಬ್ ದಿನ ಢಲ ಜಾಯೆ
ನನ್ನ ಅನುವಾದ:
ಎಲ್ಲೋ ದೂರದಿ ರವಿ ತಾ ಮುಳುಗೆ
ಸಂಜೆಯ ಹೆಣ್ಣು ಬಂದಳು ಮೆಲ್ಲಗೆ
ಬಂದಳು ಮೆಲ್ಲಗೆ
ನನ್ನ ಯೋಚನೆಯ ಅಂಗಳದಲ್ಲಿ
ಕನಸಿನ ದೀಪ ಯಾರೋ ಬೆಳಗಿದ ಹಾಗೆ
ಬೆಳಗಿದ ಹಾಗೆ
456) ಹಾಡು : ಬಡಿ ಮುಶ್ಕಿಲ ಹೈ
ನನ್ನ ಅನುವಾದ:
ಬಲೆ ಆಪತ್ತು
ಕಳೆದಿದೆ ಹೃದಯ
ಯಾರರೆ ಹುಡುಕಿ
ಕೊಡಿರಲ್ಲ
ಎಲ್ಲಿಗೆ ಹೋಗಿ
ದೂರನು ಕೊಡಲಿ
ಹೇಳಿರಿ ಯಾರರೆ ನನಗೀಗ
ನಗಲೋ ನಾ ಅಳಲೋ ನಾ
ಹೇಳಿರಿ ಮಾಡಲಿ ಏನನ್ನ
457) ಹಾಡು : ಜಬ ಭೀ ಕೋಯಿ ಲಡಕಿ ದೇಖೂ
ನನ್ನ ಅನುವಾದ:
ಯಾವುದೇ ಹುಡುಗಿ ನೋಡಿದಾಗ
ಹೇಳಿತು ನನ್ನ ಎದೆಯು - ಓಲೆ ಓಲೆ ಓಲೆ
ಓಲೆ ಓಲೆ ಓಲೆ
458) ಹಾಡು : ಆಂಖೋ ಮೇ ಕ್ಯಾ ಹೈ
ನನ್ನ ಅನುವಾದ:
ಕಣ್ಣಲ್ಲಿ ಏನಿದೆ ? ನಿನ್ನ ಮುಖ
ಎದೆಯಲ್ಲಿ ಏನಿದೆ ? ಸಂಗಾತಿಯೇ ನಿನ್ನ ಎದೆಬಡಿತ
459) ಹಾಡು : ತುಂ ಮೇರೆ ದಿಲ ಮೆ
ನನ್ನ ಅನುವಾದ:
ನೀ ನನ್ನ ಹೃದಯದಿ ಇದ್ದೀಯ
ನಾ ನಿನ್ನ ಹೃದಯದಿ ಇರುತೀನಿ
ನಾನು ನಿನ್ನ ಪ್ರೇಮದಿ ಮುಳುಗಿಹೆನು
ಇಂದು ನಿನಗೆ ಹೇಳುವೆನು
460) ಹಾಡು : ಕಹ ದೂಂ ತುಮ್ಹೆ
ನನ್ನ ಅನುವಾದ:
ನಾ ಹೇಳಲೆ ಇಲ್ಲ ಸುಮ್ಮನೇ ಇರಲೇ
ನನ್ನ ಹೃದಯದಲಿ ಏನಿದೇ
ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 47
ಶ್ರೀಕಾಂತ ಮಿಶ್ರಿಕೋಟಿ
ಅಕ್ಟೋಬರ್ ೩೦, ೨೦೨೫
೬ ವೀಕ್ಷಣೆಗಳು
ಪ್ರಕಟಿಸಿದ: ಅಕ್ಟೋಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬