ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
461) ಹಾಡು : ತುಮಕೋ ಸಿರ್ಫ ತುಮಕೋ
ನನ್ನ ಅನುವಾದ:
ನಿನ್ನ
ಕೇವಲ ನಿನ್ನ
ಬಯಸಿದೆ ನಾನು
ಬಯಕೆಯ ಆಣೆ
ಇಲ್ಲದೆ ನೀ
ಬದುಕುವದಾದರೆ
ಹೋಗುವೆ ನಾನು ಸತ್ತೇ
ಈ ಹೃದಯ ನಿನ್ನದು
ಅದರ ಬಡಿತ ನಿನ್ನದು
ಹೇಳುವುದು ನಾ ಇಷ್ಟೇ
ಜತೆಗೆ ಇರು ನೀನು
462) ಹಾಡು : ತುಮ್ ಕಿತನೀ ಖೂಬಸೂರತ್ ಹೋ
ನನ್ನ ಅನುವಾದ:
ನೀನೆಷ್ಟು ಚಂದ ಇದ್ದೀಯ
ಇದ ಕೇಳು ನನ್ನ ಎದೆಗೆ
ನೀ ಕೇಳು ಇದರ ಮಿಡಿತವನು
ಅದು ಏಕೆ ನಿನಗೆ ಮರುಳು
463) ಹಾಡು : ಯೆ ಆಂಖೇ ದೇಖಕರ ಹಂ
ನನ್ನ ಅನುವಾದ:
ಈ ಕಣ್ಣ ನೋಡಿ ನಾನು
ಮರೆಯುವೆ ಇಡೀ ಜಗವನ್ನೇ
ಇವ ಪಡೆಯುವ ಸಲುವಾಗಿ
......
464) ಹಾಡು : ಮೇರಿ ಜಾನ್ ತುಮಸೆ ಮೊಹಬ್ಬತ್
ನನ್ನ ಅನುವಾದ:
ನನ್ನ ನಲ್ಲೇ
ನಿನ್ನಲ್ಲೇ ನಂಗೆ ಪ್ರೀತಿ
ಹೇಳಲಿ ನಾ ಹೇಗೆ
ಇದು ಇಹುದು ವಾಸ್ತವವು
ಹೇಳಲಿ ನಾ ಹೇಗೆ
465) ಹಾಡು : ತೇರೆ ನಾಮ ಸೆ ಮುಜಕೋ
ನನ್ನ ಅನುವಾದ:
ನಿನ್ನ ಹೆಸರಲೆ ಜನರು ನೋಡು ನನ್ನ ತಿಳಿಯುವರು
ನಿನ್ನ ರೂಪವ ನೋಡಿ ಜನರು ನನ್ನ ಗುರುತು ಹಿಡಿಯುವರು
ನಾ ಆಗುವೆ ನಿನ ಗುರುತು
ನೀನು ನನ್ನ ಗುರುತು
466) ಹಾಡು : ಸಾಂಸೋ ಕೆ ಗೀತ ತುಮ ಹೋ
ನನ್ನ ಅನುವಾದ:
ಉಸಿರಿನ ಹಾಡು ನೀನು
ಜೀವನದ ಪ್ರೀತಿ ನೀನು
ಮನವು ಕರೆವುದು ಸದಾ ನಿನ್ನನೇ
ನಿನ್ನ ಹೊರತು ನಾ ಏನೂ ಅಲ್ಲ,
ಜೊತೆಯಾಗಿ ಇರುವ ಪ್ರತಿಜನುಮ
467) ಹಾಡು : ಲಿಖ ದೀ ಹೈ ತೇರೆ ನಾಮ್ ಪ್ಯಾರ ಭರೀ
ನನ್ನ ಅನುವಾದ:
ಬರೆದಿರುವೆ ನಿಂಗೆ ನಾನು
ಪ್ರೇಮ ಭರಿತ ಅರ್ಜಿ , ಹೋ
ದುಖ್ಖಾ ಕೊಡು ಸುಖಾ ಕೊಡು
ಎಲ್ಲ ನಿನ್ನ ಮರ್ಜಿ
468) ಹಾಡು : ಔರ ನಹೀ ಕುಛ ತುಮಸೆ ಕೆಹನಾ
ನನ್ನ ಅನುವಾದ:
ನಿನ್ನೊಡನೆ ಇನ್ನೇನು
ಹೇಳುವುದು ಇಲ್ಲ
ಜೊತೆಗಾತಿ
ಜೊತೆಯಲ್ಲಿ ಇರು ನೀ
469) ಹಾಡು : ದಿಲ್ ಜಬ್ ಸೆ ಟೂಟ್ ಗಯಾ
ನನ್ನ ಅನುವಾದ:
ಹೃದಯ ತಾನು
ಒಡೆದಂದಿನಿಂದ
ಹೇಗೆ ಬದುಕೀವಿ
ನಿನಗೆ ಗೊತ್ತೇನು
ಒಮ್ಮೆ ಹೆಚ್ಚು
ಒಮ್ಮೆ ಕಡಿಮೆ
ಕುಡಿತೀವಿ!
470) ಹಾಡು : ಓ ಯಾರಾ ಕೈಸಿ ಹೈ ತೇರಿ ಬೇವಫಾಯಿ ಎಂದು ಶುರು ಆಗುವ ಹಾಡು
ನನ್ನ ಅನುವಾದ:
ಓ ನಲ್ಲೆ
ಬದುಕೋಕೆ ಬಿಡುವುದಿಲ್ಲ
ಈ ಅಗಲಿಕೆ
ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 48
ಶ್ರೀಕಾಂತ ಮಿಶ್ರಿಕೋಟಿ
ಅಕ್ಟೋಬರ್ ೩೦, ೨೦೨೫
೪ ವೀಕ್ಷಣೆಗಳು
ಪ್ರಕಟಿಸಿದ: ಅಕ್ಟೋಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬