ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 51
ಶ್ರೀಕಾಂತ ಮಿಶ್ರಿಕೋಟಿ
ನವೆಂಬರ್ ೩೦, ೨೦೨೫
೧೧ ವೀಕ್ಷಣೆಗಳು
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
501) ಹಾಡು : ಆ ಕಹೀಂ ದೂರ್ ಚಲೇಂ
ನನ್ನ ಅನುವಾದ:
ಬಾ ಎಲ್ಲಿಗಾದರೂ ದೂರ ಹೋಗೋಣ
ಯಾವ ದುಃಖವೂ ನಮ್ಮ ತಲುಪದ ಹಾಗೆ
502) ಹಾಡು : ಸಾವನ್ ಆಯಾ ಬಾದಲ್ ಭಾಯ
ನನ್ನ ಅನುವಾದ:
ಬಂತು ಶ್ರಾವಣ
ಮೋಡ ಮುಸುಕಿದವು
ಹಾಡಿದವು ಪಿಕಳಾರ
ಹೂವು ಅರಳಿದವು
ಬರುವವರೆಲ್ಲ ಬಂದು ಆಯಿತು
ಬರುವುದು ನೀನು ಯಾವಾಗ
503) ಹಾಡು : ಸಜಾ ಪ್ಯಾರ್ ಕೀ ಮೌತ್ ಸೇ ಕಮ್ ನಹೀ
ನನ್ನ ಅನುವಾದ:
ಪ್ರೇಮದ ಶಿಕ್ಷೆಯು ಮರಣಕೂ ಕಡಿಮೆ ಇಲ್ಲ
ಆದರೆ ಈ ಶಿಕ್ಷೆಗೆ ನಮಗೆ ದುಃಖ ಇಲ್ಲವೇ
ಪ್ರೇಮ ಅಪರಾಧವಾದರೂ ನಾನದನು ಮಾಡುವೆ
ಸಾಯುವೆ ಅದಕೆ ನಾ, ಮಾಡುವುದು ಇನ್ನೇನು
ನಿನ್ನನು ದೂರ ನಾ ಹೇಗೆ ಮಾಡುವೆ
504) ಹಾಡು : ಪರಿ ಪರಿ ಹೈ ಇಂ ಪರಿ
ನನ್ನ ಅನುವಾದ:
ಇವಳು ಒಬ್ಬ ಅಪ್ಸರೆ ಹೌದು
ಸ್ವರ್ಗದಿಂದ ಬಿದ್ದಿಹಳು
ಎದುರಿಗೇ ನಿಂತಿಹಳು
ಇವಳೊಂದಿಗೆ ಪ್ರೇಮ ಆಗಿದೆ
505) ಹಾಡು : ಮೇರೆ ಚಾಂದ್ ಮುಜೆ ಆಯಾ ಹೈ ನಜರ್
ನನ್ನ ಅನುವಾದ:
ನನ ಚಂದಿರ ಕಣ್ಣೆ ಬಿದ್ದಾಗಿದೆ
ಎಲೆ ರಾತ್ರಿಯೇ ಕೊಂಚ ನಿಂತುಕೋ
ಕವಿದಿದೆ ನಗೆ ನನ ಕಂಗಳಿಗೆ
506) ಹಾಡು : ಜಿಂದಗೀ ಸೆ ಯಹಿ ಗಿಲಾ ಹೈ ಮುಜೆ
ನನ್ನ ಅನುವಾದ:
ಬದುಕ ಜತೆ ನಂಗೆ ಈ ದೂರು ಇದೆ
ನೀ ಸಿಕ್ಕಿದೆ ನಂಗೆ ತಡವಾಗಿಯೇ
507) ಹಾಡು : ಆತೀ ಹೋ ತೋ ಚಲ್
ನನ್ನ ಅನುವಾದ:
ಬರುವುದಾದಲ್ಲಿ ನಡೆ ನನ್ ಜತೆ
ಕೊಟ್ಟು ಬಿಡು ಜತೆಗಾತಿಯೇ
ಕೈಯಲಿ ಕೈಯನು
ಇರುವುದಿದೆ ಪ್ರತಿಕ್ಷಣವು ನಿನ್ ಜತೆ
ತೆಗೆದುಕೊ ಜತೆಗಾರನೇ ಕೈಯಲಿ ಕೈಯನು
508) ಹಾಡು : ಆಯಿನೇ ಕೇ ಸೌ ಟುಕಡೇ
ನನ್ನ ಅನುವಾದ:
ಕನ್ನಡಿಯನು ನೂರು ಚೂರು
ಮಾಡಿ ನಾನು ನೋಡಿರುವೆ
ಒಂದರಲ್ಲಿ ಏಕಾಕಿ
ನೂರರಲ್ಲೂ ಒಬ್ಬಂಟಿ
509) ಹಾಡು : ಸಾವನ್ ಕಾ ಮಹೀನಾ
ನನ್ನ ಅನುವಾದ:
ಶ್ರಾವಣದಾ ತಿಂಗಳು
ಗಾಳಿಯು ಸದ್ದು ಮಾಡಲು
ನನ ಹೃದಯ ಕುಣಿಯಿತು ನೋಡಿ
ವನದಲಿ ನವಿಲಿನ ಹಾಗೆ
510) ಹಾಡು : ಆಂಖೋ ಮೇ ಬಸೇ ಹೋ ತುಂ
ನನ್ನ ಅನುವಾದ:
ಕಣ್ಣಲಿ ನಿಂತಿರುವೆ
ನಿನ ಎದೆಯಲಿ ಮುಚ್ಚಿಡುವೆ
ಬೇಕಾದಾಗ ನಿನ್ನನು ನೋಡಲು
ಕನ್ನಡಿ ಮಾಡುವೆನು
ಪ್ರಕಟಿಸಿದ: ನವೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬