ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 52
ಶ್ರೀಕಾಂತ ಮಿಶ್ರಿಕೋಟಿ
ಡಿಸೆಂಬರ್ ೨೧, ೨೦೨೫
೧೦ ವೀಕ್ಷಣೆಗಳು
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
511) ಹಾಡು : ತೇರಿ ಆಂಖೋ ಕೆ ಸಿವಾ
ನನ್ನ ಅನುವಾದ:
ನಿನ ಕಂಗಳ ಹೊರತು
ಈ ಲೋಕದಿ ಇರುವುದು ಏನು?
ಇವು ತೆರೆಯಲು ಬೆಳಗು
ಇವು ಮುಚ್ಚಲು ಸಂಜೆ
ನನ ಬದುಕು ನನ ಸಾವು
ಈ ರೆಪ್ಪೆಗಳ ಕೆಳಗೆ
ನಿನ ರೆಪ್ಪೆಗಳ ಬೀದಿಯಲಿ
ನಗುತಲಿದೆ ಚೈತ್ರವು
ನನ ಕನಸುಗಳ ನಗರಗಳು ಇಲ್ಲೇ ಇವೆ
ನಿನ ರೆಪ್ಪೆಗಳ ಬೀದಿಯಲಿ
ನಗುತಲಿದೆ ಚೈತ್ರವು
ಇವು ತೆರೆಯಲು ಬೆಳಗು
ಇವು ಮುಚ್ಚಲು ಸಂಜೆ
ನನ ಬದುಕು ನನ ಸಾವು
ಈ ರೆಪ್ಪೆಗಳ ಕೆಳಗೆ
ನಿನ ಕಂಗಳ ಹೊರತು
ಈ ಲೋಕದಿ ಇರುವುದು ಏನು?
ಇವುಗಳಲಿ ಬರಲಿರುವ ನನ ಜೀವನದ ಚಿತ್ರ ಇದೆ
ಬಯಕೆಯ ಕಾಡಿಗೆಯಲಿ ಬರೆದಂಥ ಭವಿಷ್ಯ ಇದೆ
ಇವುಗಳಲಿ ಬರಲಿರುವ ನನ ಜೀವನದ ಚಿತ್ರ ಇದೆ
ಇವು ತೆರೆಯಲು ಬೆಳಗು
ಇವು ಮುಚ್ಚಲು ಸಂಜೆ
ನನ ಬದುಕು ನನ ಸಾವು
ಈ ರೆಪ್ಪೆಗಳ ಕೆಳಗೆ
ನಿನ ಕಂಗಳ ಹೊರತು
ಈ ಲೋಕದಿ ಇರುವುದು ಏನು?
512) ಹಾಡು : ಪ್ಯಾರ ಕಿಯಾ ತೋ ಡರನಾ ಕ್ಯಾ
ನನ್ನ ಅನುವಾದ:
ಪ್ರೇಮ ಮಾಡಿದ್ರೆ ಹೆದರಿಕೆ ಯಾಕೆ?
ಮಾಡಿದ್ದು ಪ್ರೇಮ ಕಳ್ತನ ಅಲ್ಲ,
513) ಹಾಡು : ಮೇರೆ ಹಾಥ್ ಮೇ ತೇರಾ ಹಾಥ್ ಹೈ
ನನ್ನ ಅನುವಾದ:
ನನ್ನ ಕೈಯಲಿ
ನಿನ್ನ ಕೈಯಿದೆ.
ಇದ್ದರೆ ನೀ ಹತ್ತಿರ
ಈ ಲೋಕ ಬೇಕಿಲ್ಲ
ನಿನ್ನ ಪ್ರೀತಿಯಲ್ಲಿ
ಆದೇನು ನಿರ್ನಾಮ
514) ಹಾಡು : ತುಂ ಕರೋ ವಾ ದಾ
ನನ್ನ ಅನುವಾದ:
ಮಾಡು ನೀ ಆಣೆ
ಎದೆಯನ್ನು ನಾ ಒಡೆಯಲ್ಲಾ
ಪ್ರೀತಿಗಾಗಿ ಜಗವನ್ನೇ ಬಿಟ್ಟು ಬಿಡುವೆ ಅಂತ
515) ಹಾಡು : ವಂದೇ ಮಾತರಂ (ಎ. ಆರ್. ರಹಮಾನ್ (ಹಾಡು)
ನನ್ನ ಅನುವಾದ: ತಾಯೇ ವಂದನೆ
516) ಹಾಡು : ದಿಲ್ ದೀವಾನಾ ಬಿನ್ ಸಜನಾ ಕೆ
ನನ್ನ ಅನುವಾದ:
ಮರುಳು ಹೃದಯ
ಬೇಡಿದೆ ಅವನ ಜತೆ
ಇದಕ್ಕೆ ಹುಚ್ಚು
ತಿಳಿ ಹೇಳಿದರೆ ಕೇಳಲ್ಲ
ಡವ ಡವ ಎಂದಿದೆ ನನ್ನ ಹೃದಯ
ಹಗಲಿರುಳು ತಾನು
ಇದಕ್ಕೆ ಹುಚ್ಚು
ತಿಳಿಹೇಳಿದರೆ ಕೇಳಲ್ಲ
ಲೋಕವು ಇಟ್ಟಿದೆ ತನ್ನ ಬೇಡಿಕೆ
ನಾನೋ ಬೇಡಿದೆ ಅವನ
ಬೇಡಿದೆ ನಾನು ಅವನ ಕ್ಷೇಮ
ಅವನ ಮನೆ ಜನರ ಕ್ಷೇಮ
ಇದರ ಹೊರತು ನನಗೆ ಏನೂ ಬೇಕಿಲ್ಲ
ಎದೆಗೆ ಹುಚ್ಚು ತಿಳಿ ಹೇಳಿದರೆ ಕೇಳಲ್ಲ
517) ಹಾಡು : ಕೋಯಿ ರೋಕ ಸಕೇ ತೋ ರೋಕ ಲೆ
ನನ್ನ ಅನುವಾದ:
ನನ್ನ ತಡೆಯಬಹುದಾದರೆ
ನನ್ನ ತಡೆಯಿರಿ
ಕುಣಿಯುವೆ ನಾ ಥೈ ಥೈ ತಕಥೈ
ಪಲ್ಲಕ್ಕಿ ಹತ್ತಿ ನಾನು ಹೊರಟೆ
ನಾನು ನಲ್ಲನ ಬಳಿ ಹೊರಟೆ
ಡೂ ಡು ಡೂಡು ಡೂ ಡೂಡ್ಡುಡು
ಡೂ ಡು ಡೂಡು ಡೂ ಡೂಡ್ಡುಡು
518) ಹಾಡು : ಮುಝೆ ತುಮಸೆ ಮುಹಬ್ಬತ ಹೋ ಗಯೀ ಹೈ
ನನ್ನ ಅನುವಾದ:
ನಂಗೆ ನಿನ್ನೊಡನೆ ಪ್ರೀತಿ ಆಗಿದೆ.
ಈ ಲೋಕ ಬಲು ಚೆಂದ ಕಾಣುತಿದೆ
519) ಹಾಡು : ದೋ ಲಬಜೋ ಮೇ ಲಿಖದೀ
ನನ್ನ ಅನುವಾದ:
ಎರಡೇ ಪದದಲಿ ಬರೆದೆ ನಾನು
ನನ್ನ ಪ್ರೇಮದ ಕತೆಯ
ಆಗು ನೀನು ನನ್ನ ರಾಜ
ನಾನು ಆಗುವೆ ರಾಣಿ
520) ಹಾಡು : ಮೈತೋ ತುಂ ಸಂಗ
ನನ್ನ ಅನುವಾದ:
ನಾನೋ ನಿನ್ನ ಜತೆ
ಕಣ್ಣನು ಕೂಡಿಸಿ
ಸೋತೇ ಹೋದೆನು ನಲ್ಲನೇ
ಪ್ರಕಟಿಸಿದ: ಡಿಸೆಂಬರ್ ೨೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬