ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.  521) ಹಾಡು : ಜಿಂದಗೀ ಜೂಠ ಹೈ ನನ್ನ ಅನುವಾದ: 
ಬದುಕಿದು ಒಂದು ಸುಳ್ಳು
ಒಂದು ದಿನ ಬಯಲಾಗುವುದು
ಸಾವು ಮಾತ್ರ ಸತ್ಯವು 522) ಹಾಡು : ತೂ ಮೇರೆ ಪಾಸ್ ನಹೀ ತೂ ಮೇರೆ ಸಾಥ ಹೈ ಎಂದು ಯೂಟ್ಯೂಬಿನಲ್ಲಿ ಹುಡುಕಿದರೆ ಸಿಗುವ ಹಾಡು - ಯೆ ದೂರಿ ಅಬ ದೂರೀ ನಹೀ ಲಗತೀ ಹೈ ಎಂದು ಆರಂಭವಾಗುತ್ತದೆ. ನನ್ನ ಅನುವಾದ: ನೀ ದೂರ ಇದ್ದ ಹಾಗೆ 
ಅನಿಸುವುದೇ ಇಲ್ಲವೋ
ನೀ ಹತ್ತಿರ ನನಗೆ ಇಲ್ಲವೋ
ನೀ ಜತೆಗೇ ಇದ್ದೀಯ 523) ಹಾಡು :
ಮೈ ತುಝೆ ಛೋಡ ಕೆ ಕಹಾಂ ಜಾವೂಂಗಾ
ನನ್ನ ಅನುವಾದ: 
ನಿನ್ನನು ಬಿಟ್ಟು ನಾ ಎಲ್ಲಿಗೆ ಹೋಗುವೆ
524) ಹಾಡು : ಮೈ ತೇರಾ ಥಾ ಮೈ ತೇರಾ ಹೂಂ ನನ್ನ ಅನುವಾದ: 
ನಾ ನಿನ್ನೋನು ಇದ್ದೆ
ನಾ ನಿನ್ನೋನು ಇದ್ದೇನೆ
ನಾ ನಿನ್ನೋನೇ ಇರ್ತೇನೆ
ಜನ ಅನ್ಲಿ ನಂಗೆ ಹುಚ್ಚು
ಅಷ್ಟು ಪ್ರೀತಿ ನಂಗೆ ನಿನ್ನಲ್ಲಿ 525) ಹಾಡು : ತೇರೆ ನಾಮ ಕೀ ಸರಗಮ್ ಸೆ ನನ್ನ ಅನುವಾದ: 
ನಿನ್ನ ಹೆಸರ ಸರಿಗಮದಿಂದ
ಪ್ರತಿಕ್ಷಣ ಸಂಗೀತಮಯ
ನಿನ್ನ ಹಾಜರಿಯಿಂದಲೇ
 ಶೂನ್ಯ ಮನದಲು ಗೀತೆಯ ಅಲಂಕಾರ 526) ಹಾಡು : ತೇರಾ ಸಾಥ್ ಹೈ ತೋ ಮುಝೆ ಕ್ಯಾ ಕಮೀ ಹೈ ನನ್ನ ಅನುವಾದ: 
ನಿನ್ನ ಸಾಂಗತ್ಯ ಇರಲು ನನಗೇನು ಕೊರತೆ
ಕತ್ತಲಲ್ಲೂ ಬೆಳಕು ಕಾಣುವುದು ನನಗೆ 527) ಹಾಡು : ತನ್ ಮನ್ ಧನ್ ಸಬ್ ಹೈ ತೇರಾ ನನ್ನ ಅನುವಾದ: 
ತನು ಮನ ಧನ ಎಲ್ಲಾ ನಿಂದೇ
ನೀನಿಲ್ಲದೆ ನಂದು ಏನಿದೆ
ಹಗಲು ರಾತ್ರಿ ನಿನ್ನ ನಾ ನೆನೆಯುವೆ 528) ಹಾಡು :
 ಓ ಪಿಯಾ ಓ ಪಿಯಾ ಪ್ಯಾರ್ ಇತನಾ ಕ್ಯೂ ಕಿಯಾ ನನ್ನ ಅನುವಾದ: 
ಓ ಪ್ರಿಯಾ ಓ ಪ್ರಿಯಾ
ಮಾಡಿದೆ ಇಷ್ಟು ಪ್ರೀತಿ ಯಾಕೆ
ನನ್ನ ಹತ್ರ ಇದ್ದುದೆಲ್ಲವ ನಿನಗೆ ಕೊಟ್ಟೆನು ಓ ಪ್ರಿಯೆ ಓ ಪ್ರಿಯೆ
ಹೇಳುತಾ ಇದೆ ನನ್ನ ಮನಸು
ನನ್ನ ಹತ್ರ ಇದ್ದುದೆಲ್ಲವ ನಿನಗೆ ಕೊಟ್ಟೆನು
529) ಹಾಡು : ಉನಕೋ ಭೀ ಹಮ ಸೆ ಮುಹಬ್ಬತ ಹೋ ನನ್ನ ಅನುವಾದ: 
ಅವಗೂ ಪ್ರೀತಿ ನನ್ನಲಿ ಇರಬೇಕಿಲ್ಲ
ಪರಿಸ್ಥಿತಿ ಇಬ್ಬರದೂ ಒಂದೇ ಇರಬೇಕಿಲ್ಲ 530) ಹಾಡು : ಕಹೀಂ ದೀಪ ಜಲೆ ಕಹೀ ದಿಲ ನನ್ನ ಅನುವಾದ: 
ಎಲ್ಲೋ ದೀಪ ಉರಿದಿದೆ
ಎಲ್ಲೋ ಹೃದಯ
ಸ್ವಲ್ಪ ಬಂದು ನೋಡು ಎಲವೋ ಪತಂಗ
ನಿನ್ನ ಅಂತಿಮ ಗತಿ ಏನು?