ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 55
ಶ್ರೀಕಾಂತ ಮಿಶ್ರಿಕೋಟಿ
ಜನವರಿ ೨೯, ೨೦೨೬
೭ ವೀಕ್ಷಣೆಗಳು
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
541) ಹಾಡು : ಜುದಾ ಹಂ ಹೋಗಯೆ ಮಾನಾ
ನನ್ನ ಅನುವಾದ:
ನಾವು ಬೇರೆ ಆದರೇನು
ತಿಳಿದುಕೋ ಇದ ನೀನು
ನಿನ್ನ ನೆನಪಿಗೆ ನಾನು ಬಂದರೆ
ಹೊರಟು ಬಾ ನೀನು
ನಿನ್ನ ನಾನು ಮರೆತುಬಿಡುವೆ
ಎಂದು ನೀನು ತಿಳಿಯಬೇಡ
ನಿನ್ನ ನೆನಪಿಗೆ ನಾನು ಬಂದರೆ
ಹೊರಟು ಬಾ ನೀನು
542) ಹಾಡು : ಮೈ ತೇರಿ ದಿವಾನೀ ಹೂಂ
ನನ್ನ ಅನುವಾದ:
ಮರುಳಾದೆ ನಾನು ನಿನಗೆ
ಮರುಳಾದಿ ನೀನು ನನಗೆ
ಈ ಪ್ರೀತಿಯು ಎಂಥ ಸಂಗತಿಯು
ಮನಸೋತು ಹೋಗುವುದು
543) ಹಾಡು : ತುಮ್ಹೆ ಪಾಕೆ ಹಮನೆ
ನನ್ನ ಅನುವಾದ:
ನಿನ್ನ ಪಡೆದ ನಿಂಗೆ
ಎರಡು ಲೋಕ ಸಿಕ್ಕಿದೆ
ಬರಿಯ ಭೂಮಿ ಏನು ನಂಗೆ
ಸ್ವರ್ಗವೂ ಸಿಕ್ಕ ಹಾಗಿದೆ
544) ಹಾಡು : ತುಮಸೆ ನಹೀ ಪಹಚಾನ (ಚಿತ್ರ - ಏಕ ಹೀ ರಾಸ್ತಾ )
ನನ್ನ ಅನುವಾದ:
ನಿನ್ನಾ ಪರಿಚಯ ನನಗೆ ಇಲ್ಲ
ಆದರೆ ಹೀಗೆ ಅನಿಸುತಿದೆ
ಮೊದಲೇ ಯಾವುದೋ ಯುಗದಲ್ಲಿ
ನಿನ್ನ ಜತೆಯು ಇದ್ದಂತೆ
545) ಹಾಡು : ಫೂಲೊಂ ಕಾ ಖಿಲನೇ ಕಾ
ನನ್ನ ಅನುವಾದ:
ಹೂವುಗಳು ಅರಳೋ
ಕಣ್ಣುಗಳು ಕಲೆಯೋ
ಕಾಲ ಇದು ಓ ಗೆಳತಿಯೇ
ನೀನಿರುವೆ ಎದೆಯಲ್ಲಿ
546) ಹಾಡು : ಉನಕೋ ಭೀ ಹಮಸೆ ಮು8ಬ್ಬತ ಹೋ
ನನ್ನ ಅನುವಾದ:
ಆಕೆಗೂ ನನ್ನಲಿ ಪ್ರೀತಿ ಇರಬೇಕಿಲ್ಲ
ಇಬ್ಬರ ಪರಿಸ್ಥಿತಿಯೂ ಒಂದೇ ಇರಬೇಕಿಲ್ಲ
547) ಹಾಡು : ಕಭೀ ತೋ ಖುಲಕೆ ಬರಸ
ನನ್ನ ಅನುವಾದ:
ಒಮ್ಮೆಯಾದರೂ ತೆರೆದು ಸುರಿ ಕರುಣೆಯ ಮೋಡವನು
ಬೆಂಕಿಯಲ್ಲಿ ಉರಿವ ಮನೆಯಂತೆ ನಾ ಇರುವೆ
548) ಹಾಡು : ಸಾಗರ ಸಂಗ ಕಿನಾರೆ ಹೈಂ
ನನ್ನ ಅನುವಾದ:
ಸಾಗರದ ಜತೆ ಇದೆ ತೀರ
ಹೂವಿನ ಜತೆ ಇದೆ ಚೈತ್ರ
ಹೀಗೆ ನೀನು ನನ್ ಜತೆ
ಮತ್ತೆ ನಾನು ನಿನ್ನವ
ಹಾಂ ನಾನು ನಿನ್ನವ
549) ಹಾಡು : ಜಬ ಕೋಯಿ ಬಾತ್
ನನ್ನ ಅನುವಾದ:
ಏನಾದರು ಹದಗೆಡಲು
ಇಲ್ಲ ತೊಂದರೆ ಬಂದಾಗ
ನಿನ ಜತೆಯೂ ನನಗಿರಲಿ
ಓ ಗೆಳೆಯಾ
ಬೇರೆ ಯಾರೂ ನನಗಿಲ್ಲ
ಹಿಂದೆಯೂ ಇರಲಿಲ್ಲ
ನಿನ್ನಯ ಹೊರತು
ನಿನ ಜತೆಯೂ ನನಗಿರಲಿ
ಓ ಗೆಳೆಯಾ
ನಿನ ಜತೆಯೂ ನನಗಿರಲಿ
ಓ ಗೆಳೆಯಾ
550) ಹಾಡು : ತುಮ್ಹೆ ಕೈಸೆ ದಿಲಸೆ
ನನ್ನ ಅನುವಾದ:
ನಿನ್ನನ್ನ ಹೇಗೆ ನಾ ದೂರ ಮಾಡುವೆ
ಸತ್ತೇ ಹೋಗುವೆನು ಹಾಗೊಮ್ಮೆ ಮಾಡಲು
ನಿನ್ನನ್ನ ಹೇಗೆ ನಾ ದೂರ ಮಾಡುವೆ
ಪ್ರಕಟಿಸಿದ: ಜನವರಿ ೨೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬