ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ.

551) ಮೂಲ ಹಾಡು : ಲೋಗೋಂ ಕೊ ಕಹನೇ ದೋ

ಅನುವಾದ -
ಜನ ಏನಾದ್ರೂ ಹೇಳ್ಲಿ ಬಿಡು
ಹೇಳ್ತಾನೇ ಇರ್ಲಿ ಬಿಡು.

552) ಮೂಲ ಹಾಡು : ತುಮ್ಹೀ ನೇ ಮೇರಿ ಜಿಂದಗಿ
ಖರಾಬ ಕರದೀ
ಅನುವಾದ -  ನೀನೇ ನನ್ನ ಬಾಳನು
ಹದಗೆಡಿಸಿದಿ

554 ) (  553ನೇ ಹಾಡಿನ ಪೂರ್ತಿ  ಅನುವಾದ ಆಗಿದೆ. ಅದನ್ನು ಬ್ಲಾಗಿನ ಮುಂದಿನ ಕಂತಿನಲ್ಲಿ ನೋಡಿ)
ಮೂಲ ಹಾಡು :  ಖಾಮೋಶ ಲಬ ಹೈ
ಅನುವಾದ:-
ಅಧರಗಳು ಮೌನ
ರೆಪ್ಪೆಗಳು ಕೆಳಗೆ
ಎದೆಯಲ್ಲಿ ಒಲವು
ಹೊಸದಾಗಿ ಇಹುದು
ಹಿಂಜರಿಕೆ ಇಹುದು ಮಾತಲ್ಲಿ ನಿನ್ನ
ಪ್ರೀತಿ ಈಗ ಹೊಸದಾಗಿ ಇಹುದು

ನಿನಗೆ ಬಾರದು ನಿದ್ದೆಯು ಈಗ
ನನಗೆ ದೊರಕದು ನೆಮ್ಮದಿಯು ತಾನು
ನಮ್ಮ ಎದೆಬಡಿತ ಜೋರು
ಇದೀಗ ಬಯಕೆ ಹೊಸ ಹೊಸತು ಇಹುದು II

555) ಮೂಲ ಹಾಡು:  ತೇರೆ  ಪ್ಯಾರ ಮೆ ಮರ ಜಾವಾ
ತೇರೆ ನಾಮ ಯಹ ದಿಲ ಕರಜಾವಾ
ಹಮ ನಾ ಬಲಾನಾ ....

ನನ್ನ ಅನುವಾದ: 
ನಿನ್ನ ಪ್ರೀತಿಲಿ ಹೋಗುವೆ ಸತ್ತು
ಹೃದಯವ ನಿನಗೆ ಬರೆದಿಟ್ಟು
ಮರೆಯಬೇಡವೋ  ನನ್ನ
ಮರೆಯಬೇಡವೋ
ದೂರ ಹೋಗಬೇಡ ನೀ ನನ್ನಿಂದ
ದೂರ ಹೋಗಬೇಡ
ಆಣೆಯ ಮಾಡಿಹೆ ನೀನು
ಅದ ಈಡೇರಿಸಬೇಕು
ಮರೆಯಬೇಡವೋ ನೀ ನನ್ನ 
ಮರೆಯಬೇಡವೋ

556) ಮೂಲ ಹಾಡು :  ಚುರಾಲಿಯಾ ಹೈ ತುಮನೇ ಜೋ ದಿಲಕೋ
ನನ್ನ ಅನುವಾದ : ಕದ್ದಿರುವೆ ನೀ ನನ್ನ ಹೃದಯ

557)ಮೂಲ ಹಾಡು: ಕೋಯಿ ಗೇಸೂಂ ಕೋಯೀ ಆಂಚಲ
ನನ್ನ ಅನುವಾದ:
ಯಾವ ಹೂಮಾಲೆಯೂ
ಯಾವ ಸೆರಗೂ
ನನ್ನ ಕರೆಯದೇ ಇರಲಿ
ಯಾವ ಕಣ್ಣ ಕಾಡಿಗೆಯೂ
ನನ್ನ ಕರೆಯದೇ ಇರಲಿ
ನಾನು ಮೌನಿ
ಮೌನಿಯಾಗೇ ಇರಲು ಬಿಡಿ
ಯಾವ ಹೆಜ್ಜೆ ಸದ್ದೂ
ಯಾವ ಸೆರಗೂ
ನನ್ನ ಕರೆಯದೇ ಇರಲಿ
ಏಕಾಕಿತನವ ಸಂಗಾತಿ ಮಾಡಿಕೊಂಡಿರುವೆ
ರಾತ್ರಿಯ ಬೆಂಕಿಯನು ಸಹಿಸಿಕೊಂಡಿರುವೆ

558) ಮೂಲ ಹಾಡು:  ಇತನಾ ನ ಮುಝ ಸೆ ತೂ ಪ್ಯಾರ ಬಢಾ
ನನ್ನ ಅನುವಾದ : 
ಇಷ್ಟೊಂದು ಪ್ರೀತಿ ನನ್ನ ಮಾಡ್ಬೇಡ
ನಾನೋ ಒಬ್ಬ ಅಲೆಮಾರಿ
ಹೇಗೆ ಆಗುವೆ ಆಸರೆಯು
ನಾನೋ ಸ್ವತಃ ಅಲೆಮಾರಿ 559, 560 ನೇ ಕ್ರಮ ಸಂಖ್ಯೆಯ ಹಾಡುಗಳು ಕೂಡ ಪೂರ್ತಿ ಅನುವಾದ ಆಗಿವೆ. ನಿರೀಕ್ಷಿಸಿ.