ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 57ನೇ ಕಂತು
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೩, ೨೦೨೬
೧೧ ವೀಕ್ಷಣೆಗಳು
ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ.
561) ಮೂಲ ಹಾಡು : ತುಮ್ಹಾರಿ ಜುಲ್ಫ್ ಕೆ ಸಾಯೇ ಮೇ
ಅನುವಾದ -
ನಿನ್ನ ಹೆರಳ ನೆರಳಲ್ಲಿ ನಾನು
ಬಾಳ ಕಳೆಯುವೆ
562) ಮೂಲ ಹಾಡು : ಮಿಲತೀ ಹೈ ಜಿಂದಗೀ ಮೆ
ಅನುವಾದ -
ಆಗುವುದು ಬಾಳಿನಲ್ಲಿ ಪ್ರೀತಿ ಒಮ್ಮೊಮ್ಮೆ ತಾನು
ಪ್ರೇಮಿಗಳ ಮಿಲನ ಕೂಡ ಆದೀತು ಒಮ್ಮೊಮ್ಮೆ ತಾನು
563 ) ಮೂಲ ಹಾಡು: ಛೋಡ ದೇ ಸಾರೀ ದುನಿಯಾ
ನನ್ನ ಅನುವಾದ: ಬಿಟ್ಟುಬಿಡಿ ಬಾಳನ್ನು ಬೇರೆ ಯಾರಿಗೋ
ಈ ದೌರ್ಬಲ್ಯ ಸರಿ ಅಲ್ಲ ಮನುಜಂಗೆ ತಾ
ಪ್ರೀತಿಗಿಂತ ಅಗತ್ಯ ಕೆಲಸ ಬಹಳ ಇವೆ
ಪ್ರೀತಿ ಒಂದೇ ಅಲ್ಲ ಎಲ್ಲವೂ ಬದುಕಲಿ
ತನುವಿನೊಂದಿಗೆ ತನು ಸೇರದಿರೆ ಏನಾಯಿತು
ಮನದ ಜೊತೆಗೆ ಮನ ಸೇರಿದೆ ಅಲ್ಲವೇ
ಸುವಾಸನೆ ದೂರದಿಂದ ಬಂದರೂ ಆಯಿತು
ತೋಟವೇ ಎದುರಿದೆ ಸಾಕಲ್ಲವೇ
ಚಂದ್ರ ಸಿಗಲಾರನು ಲೋಕದಿ ಎಲ್ಲಾರಿಗೂ
ಹಣತೆಯೊಂದೇ ಸಾಕು ಬೆಳಕಿಗೆ ಅಲ್ಲವೇ
564) ಮೂಲ ಹಾಡು: ಆಪ್ ಕೆ ಹಸೀನ್ ರುಖ ಪೆ
ನನ್ನ ಅನುವಾದ:
ನಿನ್ನ ಚಂದ ಮುಖದ ಮೇಲೆ
ಇಂದು ಹೊಸ ಹೊಳಪಿದೆ
ನನ್ನ ಹೃದಯ ಮರಳು ಆಗೆ
ನನ್ನ ತಪ್ಪು ಏನಿದೆ
ನಿನ್ನ ನೋಟ ಏನೋ ಹೇಳಿದೆ
ಅದುವು ಮಾತ್ರ ಖಂಡಿತ
565) ಮೂಲ ಹಾಡು : ಹಮ್ ತುಮಸೆ ಮೊಹಬ್ಬತ ಕರಕೆ ಸನಮ್
ನನ್ನ ಅನುವಾದ : ನಾ ನಿನ್ನನ್ನು ಪ್ರೀತಿ ಮಾಡಿ ಗೆಳತಿ
ಅಳುತಾ ಉಳಿದೆ ನಗುತಾ ನಿಂತೆ
ಸಂತೋಷದಲ್ಲಿ ನೋವನ್ನು ಸಹಿಸಿ
ಅಳುತಾ ಉಳಿದೆ ನಗುತಾ ನಿಂತೆ
566)ಮೂಲ ಹಾಡು: ಏಕ ಲಡಕೀ ಮೇರೆ ಖ್ವಾಬೊಂ ಮೇ
ನನ್ನ ಅನುವಾದ:
ಒಬ್ಬ ಹುಡುಗಿ ನನ್ನ ಕನಸಲ್ಲಿ ಬರುತ್ತಾಳೆ
ಅದು ನೀನೆ ಅದು ನೀನೇ
ನನ್ನ ಪ್ರಿಯೆ
ಅದು ನೀನೇನೆ
ಮುಟ್ಟಿದರೆ ಮುನಿ ಹಂಗೆ ಕಾಣ್ತೀಯ
ಹೂವ ಹಂಗೆ ನಗ್ತೀಯ
ನೋಡಿದ ದಿನದಿಂದ
ನೀ ನನ್ನ ಉಸಿರಲ್ಲಿ
ಇರ್ತಿಯ
567 ) ಮೂಲ ಹಾಡು: ತೇರಿ ತಸವೀರ ಕೋ ಕ್ಯಾ ತಾರೀಫ ಕರೂಂ
ನನ್ನ ಅನುವಾದ :
ನಿನ್ನ ಚೆಲುವನು ಹೇಗೆ ಹೊಗಳಲಿ ನಾನು
568 ) ಮೂಲ ಹಾಡು: ಫೂಲ್ ತುಮ್ಹೆ ಭೇಜಾ ಖತ ಮೆ
ನನ್ನ ಅನುವಾದ : ಹೂವ ನಿನಗೆ ಕಳಿಸಿದೆ ಪತ್ರದಿ
ಹೂವು ಅಲ್ಲ ಅದು ನನ್ನ ಹೃದಯ
ಪ್ರಿಯತಮ ನನಗೆ ಬರೆವುದು ನೀನು
ಇದು ನಿನಗೆ ಉಚಿತವೇ
ಪ್ರೀತಿ ತುಂಬಿದೆ ಪತ್ರದಿ ಇನಿತು
ಕಡಲ ಮುತ್ತಿನ ರೀತಿ
ಚುಂಬಿಸುತಿದ್ದೆ ಕೈಯ ನಾನು
ಹತ್ತಿರ ನೀನು ಇದ್ದಿದ್ರೆ
569 ) ಮೂಲ ಹಾಡು: ಛೋಡೇಂಗೆ ನ ಹಮ್ ತೇರೆ ಸಾಥ ಓ ಸಾಥೀ ಮರತೆ ದಂ ತಕ
ನನ್ನ ಅನುವಾದ : ಬಿಡಲಾರೆ ನಿನ್ನ ಜೊತೆಯ
ಓ ಗೆಳತಿ
ಸಾಯುವವರೆಗೂ
570 ) ಮೂಲ ಹಾಡು: ಸಾರೇ ಶಹರ್ ಮೇ ಆ
ಪ ಸಾ
ನನ್ನ ಅನುವಾದ : ಇಡೀ ಊರಲ್ಲಿ ನಿನ್ನ ಹಾಗೆ ಯಾರು ಇಲ್ಲ ಯಾರು ಇಲ್ಲ
ಪ್ರಕಟಿಸಿದ: ಏಪ್ರಿಲ್ ೧೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬