ಬಿಡುವೆನೇನಯ್ಯ ಮೊಬೈಲನು, ನಾನು,
ಬಿಡುವೆನೇನಯ್ಯ. || ಬಿಡುವೆನೇನೋ ಮೊಬೈಲೇ ನಿನ್ನ
ಅಡಿಗಡಿಗೆ ತಡುಕುವೆನಯ್ಯ
ನೆಟ್ವರ್ಕ್ ತಾನು ಇಲ್ಲದ ಇರಲು
ತಡ ಮಾಡದೆ ಮಿಡುಕುವೆನಯ್ಯ || ಮಧ್ಯರಾತ್ರಿಯು ಮೀರಿದರೇನು
ಕಣ್ಣ ರೆಪ್ಪೆ ಎಳೆದರೆ ಏನು
ಕೈ ಯೇ ಸೋತು ನೊಂದರೆ ಏನು
ಕೈಲಿನ ಮೊಬೈಲು ಬೀಳುವ ತನಕ|| ಸದನದಿ ನಾನು ಕುಳಿತರೆ ಏನು
ಮಸಣದಿ ನಾನು ನಿಂತರೆ ಏನು
ದೇವನ ಮುಂದೆ ಬಾಗಿದರೇನು
ರೋಡಲಿ ಗಾಡಿಗೆ ಸಿಲುಕುವ ತನಕ || ಬಿಡುವೆನೇನಯ್ಯ ಮೊಬೈಲನು, ನಾನು ಬಿಡುವೆನೇನಯ್ಯ|| (ಪುರಂದರದಾಸರ 'ಬಿಡುವೆನೇನಯ್ಯ , ಹನುಮ ನಿನ್ನ' ಕೃತಿಯನ್ನು ಅನುಸರಿಸಿ )