ಹಿಂದೆ ಚಾಂದನಿ ರಾತ ಮೆ ಎಂಬ ಹಿಂದಿ ಹಾಡನ್ನು ಅರ್ಧ ಅನುವಾದ ಮಾಡಿ ಸಂಪದದಲ್ಲಿ ಹಂಚಿಕೊಂಡಿದ್ದೆ ( ನನ್ನ ಸಂಖ್ಯೆ 11 ನ್ನು ಕೊಟ್ಟು)  ಈಗ ಅದರ ದಾಟಿಯಲ್ಲಿಯೇ  ಪೂರ್ತಿ ಅನುವಾದ ಮಾಡಿದ್ದೇನೆ. ಬೇಕಾದರೆ ಹಾಡಿಕೊಳ್ಳಬಹುದು. ಹುಣ್ಣಿಮೆ ರಾತ್ರಿಯಲ್ಲಿ
ನಿನ್ನ ನೋಡಿರುವೆ
ತನ್ನೊಳೆ ನಾಚುತಿಹ
ತನ್ನೊಳೆ ನಗುತಲಿಹ
ನಿನ್ನನು ನೋಡಿರುವೆ
ಹುಣ್ಣಿಮೆ ರಾತ್ರಿಯಲ್ಲಿ
ನಿನ್ನ ನೋಡಿರುವೆ

ನೀಲಿ ಆಕಾಶದಡಿ ಜೋಕಾಲಿಯಲಿ
ಏಳು ಬಣ್ಣದ ಉಯ್ಯಾಲೆಯಲಿ
ತನ್ನದೇ ರೀತಿಯಲಿ ನಲಿಯುತಿಹ
ತನ್ನೊಳೇ ನಾಚುತಿಹ
ತನ್ನೊಳೇ ನಗುತಲಿಹ ನಿನ್ನನು ನೋಡಿರುವೆ
ಹುಣ್ಣಿಮೆ ರಾತ್ರಿಯಲ್ಲಿ
ನಿನ್ನ ನೋಡಿರುವೆ

ಹರಿವ ನದಿಯ ದಂಡೆಯಲಿ
ಕೈಲಿ ಹಾಡೊಂದನು ಹಿಡಿದು
ಚೆಂದದಿ ಹಾಡುತಾ ಇರುವ
ಹೂಮಳೆ ಸುರಿಸುತ ಇರುವ
ಪ್ರೇಮವ ಹೊಮ್ಮಿಸುವ
ನಿನ್ನನು ನೋಡಿರುವೆ ಹುಣ್ಣಿಮೆ ರಾತ್ರಿಯಲಿ
ಹುಣ್ಣಿಮೆ ರಾತ್ರಿಯಲ್ಲಿ
ನಿನ್ನ ನೋಡಿರುವೆ

ಹರಡಿ ಜಡೆಯನ್ನು
ಬೀರುತ ಕಂಪನು ನೀ
ಗಾಳಿಗೆ ಬೆರೆಸುತ ಸುವಾಸನೆಯ
ನನ್ನ ಪ್ರತಿ ಉಸಿರಲಿ ಕಂಪ ಸೇರಿಸುತ
ತನ್ನೊಳೇ ನಾಚುತಿಹ
ತನ್ನೊಳೇ ನಗುತಲಿಹ ನಿನ್ನನು ನೋಡಿರುವೆ
ಹುಣ್ಣಿಮೆ ರಾತ್ರಿಯಲ್ಲಿ
ನಿನ್ನ ನೋಡಿರುವೆ

ನೀನು ಬಾಗಿಸಿದೆ
ನಿನ್ನ ಮುಖವ ನನ್ನದರ ಮೇಲೆ
ಮುಚ್ಚಿದೆ ಮುಖವ ನಾನು
ನಾಚಿಕೆಯಿಂದ ಕೈಗಳಲಿ
ಹೂಮಳೆ ಸುರಿಸುತ ಇರುವ
ಪ್ರೇಮವ ಹೊಮ್ಮಿಸುವ
ನಿನ್ನನು ನೋಡಿರುವೆ ಹುಣ್ಣಿಮೆ ರಾತ್ರಿಯಲಿ
ಹುಣ್ಣಿಮೆ ರಾತ್ರಿಯಲ್ಲಿ
ನಿನ್ನ ನೋಡಿರುವೆ