ಈತನಕ ಸುಮಾರು 550 ಹಾಡುಗಳ ಅನುವಾದವನ್ನು ಸಂಪೂರ್ಣ ಅಥವಾ ಅರೆಬರೆಯಾಗಿ ಅದೇ ದಾಟಿಯಲ್ಲಿ ಮಾಡಿದ್ದೇನೆ. ಬಹುತೇಕ ಶಬ್ದಶಃ ಅನುವಾದಗಳು. ಎಲ್ಲೋ ಒಂದೆರಡು ಭಾವಾನುವಾದಗಳು. ಸುಮಾರು 70 ಹಾಡುಗಳ ಸಂಪೂರ್ಣ ಅನುವಾದವು ಇದರಲ್ಲಿ ಸೇರಿದೆ. ಬಹುತೇಕ ಹಾಡುಗಳು ಹಿಂದಿಯವು. ಉಳಿದವು ಉಳಿದ ಭಾಷೆಗಳಿಂದ .    ಇಲ್ಲಿ ಕೊನೆಯ ಮೂರು ಹಾಡುಗಳ ಸಂಪೂರ್ಣ ಅನುವಾದಗಳನ್ನು ಕೊಡುತ್ತಿದ್ದೇನೆ.   1) ಮೂಲ ಹಾಡು: ಆಂಸೂ ಭರೀ ಹೈ ಜೀವನ ಕಿ ರಾಹೇಂ   ನನ್ನ ಅನುವಾದ: ಕಣ್ಣೀರೆ ತುಂಬಿದೆ ಈ ಬಾಳ ಯಾತ್ರೆ ಯಾರಾರ ಹೇಳಿ ಆಕೆಗೆ ನನ್ನ ಮರೆತು ಬಿಡಲು              ಕಣ್ಣೀರೆ ತುಂಬಿದೆ ಈ ಬಾಳ ಯಾತ್ರೆ             ಯಾರಾರ ಹೇಳಿ ಆಕೆಗೆ ನನ್ನ ಮರೆತು ಬಿಡಲು              ಕಣ್ಣೀರೆ ತುಂಬಿದೆ    ಮಾತನ್ನ ಮರೆತು ಆಣೆಯನು ಮುರಿದು ಹೋದವಳು ಅವಳು ನನ್ನನ್ನು ಮರೆತು ಅವಳನ್ನು ನಾನು ಅದು ಏಕೆ ನಂಬಿದೆ             ಯಾರಾರ ಹೇಳಿ ಆಕೆಗೆ ನನ್ನ ಮರೆತು ಬಿಡಲು             ಕಣ್ಣೀರೆ ತುಂಬಿದೆ      ಸಾಲುಸಾಲು ಸೋಲುಗಳ ವಿಚಿತ್ರ ಕತೆ ನನ್ನದು ಶ್ರಾವಣದಿ ಸತತ ಅಳುವಂಥ ಮೋಡ ನಾ ಸಕಲ ಸೌಭಾಗ್ಯ ಆಕೆಗೆ ನನಗೆ ನನ್ನ ನೋವು           ಯಾರಾರ ಹೇಳಿ ಆಕೆಗೆ ನನ್ನ ಮರೆತು ಬಿಡಲು            ಕಣ್ಣೀರೆ ತುಂಬಿದೆ ಈ ಬಾಳ ಯಾತ್ರೆ               ಕಣ್ಣೀರೆ ತುಂಬಿದೆ    2) ಮೂಲ ಹಾಡು: ತುಂ ಗಗನ ಕೆ ಚಂದ್ರಮಾ ಹೋ   ನನ್ನ ಅನುವಾದ   ನೀನು ಬಾನಿನ ಚಂದಿರ ನಾನೋ ಭೂಮಿಯ ದೂಳಷ್ಟೇ   ನೀನು ಪ್ರೇಮದ ದೇವತೆ ನಿನಗೆ ಅರ್ಪಿತ ಹೂವು ನಾ ನೀನು ಪೂಜೆ ನಾ ಪೂಜಾರಿ ನೀ ಅಮೃತ ನಾ ನೀರಡಿಸಲು     ನೀನು ಸಾಗರ ತೀರವು ನದಿಯ ತೆರೆಯು ಮಾತ್ರ ನಾ ನೀನು ದಿವ್ಯ ಸಂಗೀತ ಅರ್ಥ ಸಾಲಿನ ಚರಣ ನಾ ನೀನು ದೇಹ ನಾನು ನೆರಳು  ಕ್ಷಮೆಯು ನಾ ಅಪರಾಧವು     ಮೂಡಣದ ಬಣ್ಣ ನೀನು  ಸಂಜೆಯ ಇಳಿ ಬಿಸಿಲು ನೀ ನನ್ನ ಮನದ ಆರ್ತ ಧ್ವನಿಯು ನೀ ನನ ಮನದ ನವಿಲು ನೀ ನೀನು ಪೂಜೆ ನಾ ಪೂಜಾರಿ ನೀ ಅಮೃತ ನಾ ನೀರಡಿಸಲು     3) ಮೂಲ ಹಾಡು - ಛೋಟಿ ಛೋಟಿ ಖುಷಿಯೋಂ ಮೇ ಖೋಯೇ ಹುಯೆ ಹಂ   ಅನುವಾದ: ಸಣ್ಣ ಸಣ್ಣ ಖುಶಿಯಲಿ ನಾವು ಕಳೆದಿಹೆವು ಜತೆ ಜತೆಗೆ ಕಂಡು ಬಾಳ ಬಣ್ಣ ಸಂತಸದ ಗಳಿಗೆ ತಾ ಕಳೆಯದೆ ಇರಲಿ ಬದುಕೋಣ ಪ್ರತಿ ಗಳಿಗೆ ನಾಳೆ ಯಾರು ಕಂಡಿಹರು ಉಸುಕಿನ ರೀತಿ ಜಾರಿದೆ ಬದುಕು ಈ ಸಣ್ಣ ಋುತುವು ಕಳೆಯದೆ ಇರಲಿ ಈ ಸಣ್ಣ ಆಟಿಗೆ ಒಡೆಯದೆ ಇರಲಿ ಹೀಗೆ ನಡಿ ನಡಿ ನೀ ಹೀಗೆ ನಡಿ ನಡಿ ನೀ ಹೀಗೆ ನಡಿ ನಡಿ ನೀ ನಾಳೆಯ ಯಾರು ಕಂಡಿಹರು ಪಯಣಿಗ ನಡಿ ನಡಿ ನೀ ಹೀಗೆ ನಡಿ ನಡಿ ನೀ ಹೀಗೆ ನಡಿ ನಡಿ ನೀ ನಾಳೆಯ ಯಾರು ಕಂಡಿಹರು ಸಣ್ಣ ಸಣ್ಣ ಖುಷಿಯಲಿ ...