ತಾಜ ಮಹಲ್ ಚಿತ್ರದ ಈ ಹಾಡನ್ನು ಹಿಂದೆ 245 ನೇ ಅನುಕ್ರಮ ಸಂಖ್ಯೆಯಲ್ಲಿ ಅರ್ಧಂಬರ್ಧ ಅನುವಾದ ಮಾಡಿ ಈ ತಾಣದಲ್ಲೇ ಬ್ಲಾಗ್ ಬರೆದಿದ್ದೆ.  ಈಗ ಆ ಹಾಡನ್ನು ಪೂರ್ತಿಯಾಗಿ ಅದೇ ಧಾಟಿಯಲ್ಲಿ ಹಾಡಬಹುದಾದಂತೆ ಅನುವಾದಿಸಿದ್ದೇನೆ. ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕು ಲೋಕ ಬೇಡೆಂದರೂ ಆ ದೇವರೇ ಬೇಡೆಂದರೂ ನೀ ಬರಲೇಬೇಕು   ಹುಡುಕುವ ಕಣ್ಣೋಟ ಕರೆದಿದೆ ನಿನ್ನ ಪ್ರೀತಿಯ ನಿಟ್ಟುಸಿರು ಕರೆದಿದೆ ನಿನ್ನ ಓ ನನ್ನ ನಲ್ಲೆ ಪ್ರಿಯತಮೆ ಕೇಳೆ ನೀ ಬರಲೇಬೇಕು   ಇದ ಒಪ್ಪಿದೆ ನಾನು ನಾ ಬರಲೇ ಬೇಕು ಆದ್ರೆ ಇದ ತಿಳಿದುಕೋ ನೀನು ಕರೆದಾಗ ನಿನ್ನ  ನೀ ಬರಲೇಬೇಕು   ಪ್ರೀತಿಯನ್ನ ಮಾಡಿದ ಮೇಲೆ ಹೆದರಿಕೆ ಏಕೆ ಹೃದಯ ಕೊಟ್ಟೆ ನಾನು ಪ್ರಾಣ ಕೊಡುವೆ ನೀನು ಹೊಳೆಯುವವರೆಗೆ ಈ ಚಂದ್ರ ತಾರೆ ತಪ್ಪಲಾರೆವು ನಾವು ಇಟ್ಟಂಥ ಆಣೆ / ಕೊಟ್ಟಂಥ ಭಾಷೆ ಕರೆ ನೀಡೆ ಒಬ್ಬರು ಬರಲೇ ಬೇಕು ಇನ್ನೊಬ್ಬರು  ನಾವು ಬರಲೇಬೇಕು