ಆರಾಧನಾ ಚಿತ್ರದ ಈ ಹಾಡನ್ನು ಈ ಹಿಂದೆ 27ನೇ ಅನುಕ್ರಮ ಸಂಖ್ಯೆಯಲ್ಲಿ ಒಂದೆರಡು ಸಾಲು ಅನುವಾದಿಸಿದ್ದೆ . ಈಗ ಈ ಹಾಡಿನ ಪೂರ್ತಿ ಅನುವಾದ ಇಲ್ಲಿದೆ. ಇದನ್ನು ಮೂಲ ಧಾಟಿಯಲ್ಲೇ ಹಾಡಬಹುದು
ಬಿಳಿಯ ಕಾಗದವಾಗಿತ್ತು ನನ್ನ ಮನಸು
ಬರೆದೆ ಅದರ ಮೇಲೆ ನಿನ್ನ ಹೆಸರು
ಖಾಲಿ ಅಂಗಳವಾಗಿತ್ತು ಬಾಳು
ಅಲ್ಲಿ ಬೇರೂರಿತು ನಿನ್ನ ಪ್ರೀತಿ
ಚೂರಾಗುವುದೋ ಕನಸು ಹೆದರುವೆ ನಾನು
ಪ್ರತಿದಿನ ಕನಸಲ್ಲಿ ಕಾಣುವೆ ನಿನ್ನ
ಒಡೆಯದೆ ಇರಲಿ ನನ್ನ ಕನಸು , ಹೆದರುವೆ ನಾನು
ಖಾಲಿ ಕನ್ನಡಿಯಂತಿತ್ತು ಮನಸು
ಅಲ್ಲಿ ನೆಲೆ ನಿಂತಿತು ನಿನ್ನ ರೂಪ
ಕಳಕೊಂಡೆ ನಾನು ನೆಮ್ಮದಿ ಮತ್ತು ನಿದ್ದೆ
ರಾತ್ರಿ ಇದ್ದು ಎಚ್ಚರ ಬೇಡುತ ಇದ್ದೆ
ಮುಂದಕ್ಕೆ ಏನು ಹೇಳಲಿ ನಾನು, ಪ್ರೀತಿಲಿ ಬಿದ್ದೆ
ಶತ್ರುವಿನ ಹಾಗೆ ಇತ್ತು ಮನಸು
ಅದು ಆಗೇ ಬಿಡ್ತು ನನ್ನ ಗೆಳೆಯ
ತೋಟದೆ ಹೂವು ಅರಳುವ ಮುನ್ನ
ನನ್ನ ನಿನ್ನ ಕಣ್ಣು ಕಲೆಯುವ ಮುನ್ನ
ಎಲ್ಲಿ ಇದ್ದವು ಈ ಮಾತು, ಈ ಕಥೆ,
ಇವು ನಲ್ಲ
ಬಿದ್ದ ನಕ್ಷತ್ರ ಆಗಿತ್ತು ಮನಸು
ನಿನ್ನದಾಗಿ ಆಯಿತು ಹುಣ್ಣಿಮೆ ಚಂದ್ರ
ಆರಾಧನಾ ಚಿತ್ರದ ಕೋರಾ ಕಾಗಜ್ ಥಾ ಏ ಮನ ಮೇರಾ ಹಾಡಿನ ಪೂರ್ಣ ಅನುವಾದ
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೮, ೨೦೨೬
೩ ವೀಕ್ಷಣೆಗಳು
ಪ್ರಕಟಿಸಿದ: ಏಪ್ರಿಲ್ ೧೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬