1972 ರಲ್ಲಿ ಬಿಡುಗಡೆಯಾದ ಜಾನಿ ದಿವಾನಿ ಚಿತ್ರದ ಈ ಹಾಡನ್ನು ಸ್ವಲ್ಪವೇ ಅನುವಾದ ಮಾಡಿ 119ನೇ ಸಂಖ್ಯೆ ಹಾಕಿ ಸಂಪದದಲ್ಲಿ ಹಿಂದೆ ಪೋಸ್ಟ್ ಮಾಡಿದ್ದೆ. ಈಗ ಅದರ ಅನುವಾದ ಅದೇ ಧಾಟಿಯಲ್ಲಿ ಪೂರ್ತಿಯಾಗಿದೆ.   ಗೆಳತಿಯೇ ನಿನ್ನನ್ನು ಹುಡುಕುತ ಅಲೆಯುತ ಇರುವೆನು ರಾತ್ರಿ ಹಗಲೆನ್ನದೆ  ಎಲ್ಲಿಗೆ ಓಗೊಡು ಅಡಗಿಹೆ ಎಲ್ಲಿ ನೀ ಎಲ್ಲಿ ನೀ ಇಲ್ಲೇ ನಾ   ಓ ನನ್ನ ಗೆಳತಿಯೇ ಪ್ರೇಮದ ಹಾದಿಲಿ ಜೊತೆಯಲ್ಲಿ ನಡೆದೆವು ನಾವ್ಗಳು ಏನಾಯಿತೋ ದಾರಿಲಿ ಎಲ್ಲಿಯೋ ತಪ್ಪಿಸಿಕೊಂಡೆವು ಎಲ್ಲಿ ನೀ ಇಲ್ಲೇ ನಾ   ಹೃದಯ ಹುಚ್ಚೆದ್ದಿತು ಕುಣಿಯಲು ತೊಡಗಿತು ತಂತಾನೆಯೇ ಮನಬಂದಂತೆ ಕೈಯಲೀ ಕೈಯಿಟ್ಟು ಬಿಟ್ಟು ನೀ ಹೋದೆಯಾ ಎಲ್ಲಿ ನೀ ಇಲ್ಲೇ ನಾ   ಸನಿಹವೇ ನಿಂತಿಹೆ ಎದೆಯಲೇ ಅಡಗಿಹೆ ನನಗಿದು ತಿಳಿಯದೆ ಹೋಯಿತು ಎದೆಯಲೀ ಹುಡುಕದೆ ಲೋಕವ ಹುಡುಕಿದೆ.