ಹಿಂದೆ 185 ನೇ ಸಂಖ್ಯೆಯ ಅಡಿ ಅಂದಾಜ್ ಚಿತ್ರದ ಈ ಹಾಡಿನ ಕೆಲವು ಸಾಲುಗಳನ್ನು ಅದೇ ಧಾಟಿಯಲ್ಲಿ ಹಾಡಲು ಬರುವಂತೆ ಅನುವಾದಿಸಿದ್ದೆ . ಈಗ ಅದರ ಪೂರ್ತಿ ಅನುವಾದ ಇದೋ ಇಲ್ಲಿದೆ.     ಬಾಳಿದು ಸುಂದರ ಪಯಣ  ನಾಳೆ ಏನೆಂದು ಯಾರಿಗ್ಗೊತ್ತು   ಚಂದ್ರ ತಾರೆಯರ ದಾಟಿ ಹೋಗ್ಬೇಕು ಬಾನ ದಿಗಂತಾನೂ ಹಿಂದೆ ಬಿಡ್ಬೇಕು ಹಿಂದೇನೆ ಉಳಿಯೋದು ಈ ಪ್ರಪಂಚ ನಾಳೆ ಏನೆಂದು ಯಾರಿಗ್ಗೊತ್ತು ll ೧ ll   ನಗುತಾ ಹಾಡ್ತಾ ಇಲ್ಲಿಂದ ನಡಿ ಲೋಕ ಏನನ್ನತ್ತೆ ಚಿಂತೆ ಮಾಡ್ಬೇಡ ಮುಗುಳು ನಗ್ತಾನೇ ಕಳಿ ಆಯುಷ್ಯ ನಾಳೆ ಏನೆಂದು ಯಾರಿಗ್ಗೊತ್ತು ll ೨ ll   ಸಾವು ಒಂದಿನ ಬಂದೇ ಬರ್ತದೆ ಜೀವ ಒಂದಿನ ಹೋಗೇ ಹೋಗ್ತದೆ ಇಂಥ ಮಾತಿಂದ ಗಾಬರಿ ಏಕೆ? ನಾಳೆ ಏನೆಂದು ಯಾರಿಗ್ಗೊತ್ತು ll ೩ ll