'ಬಡೇ ಅಚ್ಛೆ ಲಗತೇ ಹೈ' ನ ಹಾಡಿನ ಪೂರ್ಣ ಅನುವಾದ
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೮, ೨೦೨೬
೪ ವೀಕ್ಷಣೆಗಳು
ಬಾಲಿಕಾ ಮಧು ಚಿತ್ರದ ಈ ಹಾಡಿನ ಕೆಲವೇ ಸಾಲುಗಳನ್ನು ಅನುವಾದಿಸಿ ನಿಮ್ಮ ಜತೆ 312ನೇ ಸಂಖ್ಯೆಯ ಅಡಿ ಹಂಚಿಕೊಂಡಿದ್ದೆ . ಈಗ ಈ ಹಾಡಿನ ಪೂರ್ತಿ ಅನುವಾದ - ಮೂಲ ಹಾಡಿನ ಧಾಟಿಯಲ್ಲಿ - ನೋಡಿ.
ಭಾಳ ಛಂದ ಅನಿಸ್ತಾವೆ
ಈ ಭೂಮಿ ಈ ನದಿಯು ಈ ರಾತ್ರಿ
ಮತ್ತೆ ನೀ
ನಾನು ನೀನು ಎಷ್ಟೊಂದು ಹತ್ರ
ದೂರ ಚಂದ್ರ ತಾರೆ
ಆದ್ರೆ ನಿಜ ಅನಿಸ್ತಾವೆ
ಈ ಭೂಮಿ ಈ ನದಿಯು ಈ ರಾತ್ರಿ
ಮತ್ತೆ ನೀ
ನೀನು ನಾಳೆ ಇವನೆಲ್ಲ ಬಿಟ್ಟು
ದೂರ ಹೊರಟು ಹೋಗುವಿ
ನನ್ನ ಜತೆಗೆ ಇವಕೂ
ಬಹಳ ನೆನಪು ಆಗುವಿ
ಭಾಳ ಛಂದ ಅನಿಸ್ತಾವೆ
ಈ ಭೂಮಿ ಈ ನದಿಯು ಈ ರಾತ್ರಿ
ಮತ್ತೆ ನೀ
ಪ್ರಕಟಿಸಿದ: ಏಪ್ರಿಲ್ ೧೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬