ಹಿಂದಿ ಚಲನಚಿತ್ರ ಗಾಯಕ ಮುಹಮ್ಮದ ರಫಿ ಹಾಡಿರುವ ಈ ಹಾಡಿನ ಒಂದೆರಡು ಸಾಲುಗಳ ಅನುವಾದವನ್ನು 372 ನೇ ಅನುವಾದವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಹಾಡಿನ ಪೂರ್ಣ ಅನುವಾದ ಇಲ್ಲಿದೆ. ನೋಡಿ. ಎಂದಿನಂತೆ ಮೂಲದ ಧಾಟಿಯಲ್ಲೇ ಇದನ್ನೂ ಹಾಡಬಹುದು   ಹೇಗೆ ನಡೆವುದು ಜೀವನ ನೀ ಇಲ್ಲದೆ ಕಾಣುವೆನು ಕೊರತೆ ಪ್ರತಿಯೊಂದರಲ್ಲೂ ನೀ ಇಲ್ಲದೆ     ಹೂವು ತಾ ಅರಳಲು ಮುಳ್ಳು ಅನಿಸಿತು ನಕ್ಷತ್ರ ಕಣ್ಗೆ ಕಾಣಲು ಆರೋ ದೀಪ ಅನಿಸಿತು ಬೆಂಕಿಯ ಬೀರಿತು ಬೆಳುದಿಂಗಳು ನೀ ಇಲ್ಲದೆ       ಚಂದ್ರ ಮುಖವ ಮರೆಸಿದ, ಇಡಿಯ ಲೋಕ ಉದಾಸೀನವು  ಎದೆಯ ಬಡಿತ ಹೇಳಿದೆ ನೀ ಇರುವೆ ಸನಿಹವೇ  ಗೋಳಾಡುತ ಈ ಜೀವವು ನೀ ಇಲ್ಲದೆ