ಹಿಂದೆ ನಾನು ಒಂದೆರಡೇ ಸಾಲು ಅನುವಾದ ಮಾಡಿ ಬಹುಶಃ 434ನೇ ಅನುವಾದವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದನ್ನು ಪೂರ್ತಿಗೊಳಿಸಿದ್ದೇನೆ. ಅದು ಇಲ್ಲಿದೆ.     ಮರುಳರ ನೀವು ಕೇಳಲೇಬೇಡಿ ಅವರಿಗೆ ಏನು ಆಗಿದೆ ಅಂತ ಹಾಂ ಅವರ ಹೃದಯವ ನೀವು ಕೇಳಿ ಅವರ ಕನಸಿಗೆ ಏನು ಆಗಿದೆ ಅಂತ     ಉಳಿದವರಿಗೆ ಇವರು ಕುಡಿಸುತ ಇಹರು ಮತ್ತೆ ತಾವೇ ದಾಹದಿ ಇರುತಾರೆ ಕುಡಿಯುವವರಿಗೆ ಏನು ಗೊತ್ತು ಹೇಳಿ ಕುಡಿಸುವವರಿಗೆ ಏನು ಆಗಿದೆ ಅಂತ   ದೇವರು ಮಾಡಿದ ಮಾನವನ ಈ ಮಾನವ ಪ್ರೀತಿ ಮಾಡಿದನು ಮೇಲೆ ಕುಳಿತ ದೇವನು ಅರಿಯ ಮನುಜನಿಗೇನು ಆಗಿದೆ ಅಂತ