ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಜನ ೦೯ ಕವನ ೫ ವೀಕ್ಷಣೆ

ಹಸಿರಿಂದ ತುಂಬಿರುವ ಭೂಮಿಯನು, ನೋಡಿದೆನು ಸಖಿ ಕೆಸರಲ್ಲಿ ಅರಳಿರುವ ತಾವರೆಯ, ಕಾಡಿದೆನು ಸಖಿ   ವಿಪರೀತ ಎನಿಸುವಾ ಬದುಕಲ್ಲಿ, ಏನಿದೆಯೊ ಸವಿ ಕನಸಿನಲಿ ಜೊತೆಗಾರ ನನಸಂತೆ, ಮೂಡಿದೆನು ಸಖಿ   ಚಿಂತಿಸುವ ಸರಕಿಂದು ಬರ...

ಲಡಾಖ್‌ ನಲ್ಲಿ ಭಾರತ ಭದ್ರತೆ ಹೆಚ್ಚಿಸಲಿ

ಕೆ.ಪಿ.ಅಶ್ವಿನ್ ರಾವ್ ಜನ ೦೮ ಲೇಖನ ೧೨ ವೀಕ್ಷಣೆ

ಒಂದೆಡೆ ಸ್ನೇಹದ ನಾಟಕ, ಮತ್ತೊಂದೆಡೆ ವಿಸ್ತರಣಾವಾದದ ಚಾಳಿ. ಭಾರತದೊಂದಿಗಿನ ಗಡಿಸಂಬಂಧದಲ್ಲಿ ಚೀನಾದ ದ್ವಿಮುಖ ನೀತಿ ಮತ್ತೊಮ್ಮೆ ಬೆತ್ತಲಾಗಿದೆ. ಪೂರ್ವ ಲಡಾಖ್‌ ನ ಗಡಿಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾಲೈದು ವರ್ಷಗಳ ನಿರಂ...

ಕಪಿಲ್ ದೇವ್ ಕಲಿಸಿದ ಸಹನೆಯ ಪಾಠ !

ಕೆ.ಪಿ.ಅಶ್ವಿನ್ ರಾವ್ ಜನ ೦೮ ಲೇಖನ ೧೦ ವೀಕ್ಷಣೆ

೧೯೮೩ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಳ ಫೈನಲ್ ಅನ್ನು ನೋಡಿದವರಿಗೆ ಅಥವಾ ಕೇಳಿದವರಿಗೆ ಅಂದು ಜಯದ ಸಂಭವದಲ್ಲಿದ್ದ ಮತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ದೈತ್ಯ ವಿವಿಯನ್...

ನದಿಗಳ ಜೋಡಣೆಯ ಲಾಭ ನಷ್ಟಗಳು

ಶ್ರೀರಾಮ ದಿವಾಣ ಜನ ೦೮ ಲೇಖನ ೫ ವೀಕ್ಷಣೆ

ಮೇಲ್ನೋಟಕ್ಕೆ ಅಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯ ಎನಿಸಬಹುದು, ಆದರೆ ದೀರ್ಘಕಾಲದ ಪರಿಣಾಮಗಳು ಮಾತ್ರ ಆಘಾತಕಾರಿ. ಸಾಮಾನ್ಯ ಮನುಷ್ಯರ ತಿಳುವಳಿಕೆಗೆ ನಿಲುಕದ ವಿಷಯವೆಂದರೆ " ನದಿಗಳ ಜೋಡಣೆ "  ಎಂಬ ಬೃಹತ್ ಯೋಜನೆ. ಗಂಗಾ...

ಸ್ಟೇಟಸ್ ಕತೆಗಳು (ಭಾಗ ೧೫೫೫) - ನಿಖರತೆ

ಬರಹಗಾರರ ಬಳಗ ಜನ ೦೮ ಲೇಖನ ೮ ವೀಕ್ಷಣೆ

ರಮೇಶನಿಗೆ ಸರಿಯಾಗಿ ತಿಳಿದಿತ್ತು ತಾನು ಹೋಗಬೇಕಾಗಿರುವ ದೂರ ತಲುಪ ಬೇಕಾಗಿರುವ ಎತ್ತರ ಎಲ್ಲವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ. ಆದರೆ ತಲುಪಬೇಕಾದ ದಾರಿಯು ಸರಿಯಾಗಿ ಕಂಡ ಮೇಲೆ ನಿಖರವಾಗಿ ತಿಳಿದ ಮೇಲೆ ಆ ಕಡೆಗೆ ಪಯಣವನ...

ಸ್ನಾನದ ಮನೆಯೇ ಮಸಣದ ಬಾಗಿಲು !

ಬರಹಗಾರರ ಬಳಗ ಜನ ೦೮ ಲೇಖನ ೮ ವೀಕ್ಷಣೆ

ಈಗ ನಾನು COHb ಎಂದರೆ ಸಾಕು ಓಹ್ ಅದು ಕಾರ್ಬಾಕ್ಸಿಹೀಮೋಗ್ಲೋಬಿನ್ ಎಂದು ಹೇಳುವಷ್ಟು ಅದು ಪರಿಚಿತವಾಗಿದೆ. ನೋಡಿ ಈ ಕಾರ್ಬನ್ ಮಾನಾಕ್ಸೈಡ್ ಒಂದು ಅಸ್ಥಿರ ಅನಿಲ ಅಷ್ಟೇ. ಆದರೆ ಅದನ್ನು ವಿಷಕಾರಿ ಎಂದು ನಾಮಕರಣ ಮಾಡಿದ್ದು ರ...

ಒಡಲ ಧ್ವನಿ

ಬರಹಗಾರರ ಬಳಗ ಜನ ೦೮ ಕವನ ೪ ವೀಕ್ಷಣೆ

ಹೊರಗಡೆ ಎಲ್ಲೂ ಚಳಿಗಾಳಿ ಬೀಸುತ್ತಿಲ್ಲ ಬರಿದೆ ಕೆಂಡದಂತೆ ಸುಡುತ್ತಿದೆ ನೆಲ ನನ್ನ ಒಡಲಿನಂತೆ !   ಬಸಿರಾಗಿರುವ ನನ್ನ ಕಣ್ಣುಗಳೂ,ಉರಿಯುತ್ತಿದೆ ಹೊಗೆ ಬರುತ್ತಿದೆ ಬದುಕುವ ಬಗೆ ಹೇಗೆ ?   ಒಡಲಲ್ಲಿ ಇರುವ ಮಗು...

ಗಾನ ವಿಜ್ಞಾನ ಚೇತನ (ಭಾಗ ೧೦) - ಕೆ ಎಸ್ ನಿಸಾರ್ ಅಹಮದ್

ಕೆ.ಪಿ.ಅಶ್ವಿನ್ ರಾವ್ ಜನ ೦೭ ಲೇಖನ ೮ ವೀಕ್ಷಣೆ

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾ...

ಎರಡು ರಟ್ಟುಗಳ ನಡುವೆ

ಕೆ.ಪಿ.ಅಶ್ವಿನ್ ರಾವ್ ಜನ ೦೭ ಪುಸ್ತಕ ವಿಮರ್ಶೆ ೭ ವೀಕ್ಷಣೆ

ಸಣ್ಣ ಕತೆಗಾರರಾಗಿ ಖ್ಯಾತಿ ಪಡೆದ ಎಸ್ ದಿವಾಕರ್ ಅವರ ನೂತನ ಪುಸ್ತಕ ‘ಎರಡು ರಟ್ಟುಗಳ ನಡುವೆ’ ಹೊರ ಬಂದಿದೆ. ಪುಸ್ತಕವೊಂದು ವಾಸ್ತವ ಪ್ರಪಂಚಕ್ಕೆ ಸೆಡ್ಡು ಹೊಡೆದರೆ ಹೇಗೆ? ಕತೆಯಲ್ಲಿ ಓದುಗನೇ ಒಂದು ಪಾತ್ರವಾದರೆ ಏನು ಗತಿ?...

ವೆನಿಜುಲಾ ಮೇಲಿನ ಆಕ್ರಮಣ

ಶ್ರೀರಾಮ ದಿವಾಣ ಜನ ೦೭ ಲೇಖನ ೫ ವೀಕ್ಷಣೆ

ಈ ಜಗತ್ತಿಗೆ ಡೊನಾಲ್ಡ್ ಟ್ರಂಪ್ ಒಂದು ಗತಿ ಕಾಣಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹಪಾಹಪಿಸುತ್ತಿರುವ ವ್ಯಕ್ತಿ ಯಾವುದೇ ತಕ್ಷಣದ ಪ್ರಲೋಭನೆ, ಪ್ರಚೋದನೆ, ಯುದ್ಧ ಅಥವಾ ನಿರ್ಧಿಷ್ಟ ಮುನ್...

ಸ್ಟೇಟಸ್ ಕತೆಗಳು (ಭಾಗ ೧೫೫೪) - ಸಮಾಜ

ಬರಹಗಾರರ ಬಳಗ ಜನ ೦೭ ಲೇಖನ ೧೪ ವೀಕ್ಷಣೆ

ಸಮಾಜದ ಓರೆ ಕೋರೆಗಳ ತಿದ್ದುವುದ್ದಕ್ಕೆ ಪಣ ತೊಟ್ಟಿದ್ದಾನೆ, ತನ್ನ ಜೊತೆ ಸಮಾಜದ ಪ್ರತಿಯೊಬ್ಬರಿಗೂ ಒಳಿತಾಗಲು ಬಯಸಿದ್ದಾನೆ, ರಾತ್ರಿ ಹಗಲೆನ್ನದೆ ದುಡಿಯುತ್ತಾನೆ, ತನಗಿಂತ ಸಮಾಜವೇ ಮೇಲೆ ಬರಲೆಂದು ಆಶಿಸುತ್ತಾನೆ. ಮನೆಗಿಂತ...

ಒಂದು ಒಳ್ಳೆಯ ನುಡಿ - 311

ಬರಹಗಾರರ ಬಳಗ ಜನ ೦೭ ಲೇಖನ ೬ ವೀಕ್ಷಣೆ

ನಾಲಿಗೆಯಿಂದಲೇ ಸ್ವರ್ಗ : ನಾಲಿಗೆಯಿಂದಲೇ ನರಕ ಎಷ್ಟೊಂದು ಸತ್ಯವಾದ ನಾಣ್ನುಡಿ. 'ಕುಲಕುಲವೆಂದು ಹೊಡೆದಾಡದಿರಿ, ತಮ್ಮ ಕುಲದ ನೆಲೆಯನೇನಾದರು ಬಲ್ಲಿರಾ? 'ಹಾಡಿದವರು ದಾಸಶ್ರೇಷ್ಠರು. 'ನಾಲಿಗೆ ಕುಲವನರುಹಿತು' ಮಹಾಭಾರತ ಮಹ...

ಆಲೋಚನೆ ಬದಲಿಸಿಕೊಳ್ಳಿ

ಬರಹಗಾರರ ಬಳಗ ಜನ ೦೭ ಲೇಖನ ೧೫ ವೀಕ್ಷಣೆ

ಇದು ಶ್ರೀಮಂತನೊಬ್ಬನ ಕತೆ. ಆತ ಒಂದು ಶಹರದಲ್ಲಿ ವಾಸವಾಗಿದ್ದ. ಶ್ರೀಮಂತನೆಂದ ಮೇಲೆ ಹಣಕ್ಕೆಲ್ಲಿಯ ಕೊರತೆ? ಇದೇ ವಿಷಯ ಆತನಿಗೆ ಅಹಂಕಾರ ಬರುವಂತೆ ಮಾಡಿತ್ತು. ತಾನು ಏನು ಬೇಕಾದರೂ ಮಾಡಬಲ್ಲೆನೆಂಬ ಅಹಂಕಾರ ಆತನಲ್ಲಿ ಮನೆಮಾಡ...

ಒಂದು ಗಝಲ್

ಬರಹಗಾರರ ಬಳಗ ಜನ ೦೭ ಕವನ ೮ ವೀಕ್ಷಣೆ

ದೇಹವು ಹೀಗೆಯೇ ಸೊರಗಿ ಹೋಗದು ಗೆಳೆಯ ಮನಸು ಹಾಗೆಯೇ ಕರಗಿ ಬೀಳದು ಗೆಳೆಯ   ನೀನೆಂದ ಮಾತ್ರಕ್ಕೆ ಹೃದಯ ಕೊಡಲೇ ಒಲವೆ ವಂಚಿತ ಬದುಕು ಯಾವತ್ತೂ ಬೇಡದು ಗೆಳೆಯ   ಚಿಂತನೆ ತರುವ ದಿನವೂ ಮುನ್ನುಡಿ ತಾರದೆ ಚಿಂತೆಯ ಜೊತೆ...

ಪಶುಪಾಲನೆಗೆ ಸಹಕಾರಿ ಮೊಳಕೆ ಮೇವು ಉತ್ಪಾದನೆ

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೧೫ ವೀಕ್ಷಣೆ

ಹೈನುಗಾರಿಕೆ ಮಾಡುವುದೆಂದರೆ ಅದಕ್ಕೆ ಬರೇ ಹಸು ಮಾತ್ರ ಇದ್ದರೆ ಸಾಲದು. ಮೇವು ಉತ್ಪಾದನೆ ಮಾಡಬೇಕು. ಅದಕ್ಕೆ  ಹಟ್ಟಿಗಿಂತ ಹತ್ತು ಪಾಲು ಸ್ಥಳಾವಕಾಶ ಬೇಕು. ನೀರಾವರಿ ಬೇಕು. ಹಸುವಿಗಿಂತ ಹೆಚ್ಚು ಅದಕ್ಕೆ ಖರ್ಚು ತಗಲುತ್ತದೆ...

ಸಾರ್ವಭೌಮತ್ವಕ್ಕೆ ಧಕ್ಕೆ

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೬ ವೀಕ್ಷಣೆ

ವೆನೆಜುವೆಲಾ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ಮಿಲಿಟರಿ ದಾಳಿ ಮತ್ತು ಆ ದೇಶದ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಬಂಧನ ೨೧ನೇ ಶತಮಾನದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಇತಿಹಾಸದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆ. ಪ್ರಜಾಪ್...

ದಯವಿಟ್ಟು ನಮ್ಮ ಮಾನ ಮರ್ಯಾದೆ ಕಾಪಾಡಿ

ಶ್ರೀರಾಮ ದಿವಾಣ ಜನ ೦೬ ಲೇಖನ ೬ ವೀಕ್ಷಣೆ

ರಾಜ್ಯದ, ಸಮಾಜದ, ಪ್ರಜಾಪ್ರಭುತ್ವದ, ಮಾನವೀಯ ಮೌಲ್ಯಗಳ, ನೈತಿಕ ತತ್ತ್ವಗಳ, ನಾಗರಿಕ ಪ್ರಜ್ಞೆಯ ಘನತೆಯನ್ನು ರಕ್ಷಿಸಲು ಕಳಕಳಿಯ ಮನವಿ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ತುರ್ತಾಗಿ ಆಗಬೇಕಾದ ಕೆಲಸ ಇದು. ದಯವಿಟ್ಟು ಸಾ...

ಸ್ಟೇಟಸ್ ಕತೆಗಳು (ಭಾಗ ೧೫೫೩) - ಪ್ರತಿಭೆ

ಬರಹಗಾರರ ಬಳಗ ಜನ ೦೬ ಲೇಖನ ೧೦ ವೀಕ್ಷಣೆ

ಪ್ರತಿಭೆಗಳಿಗೆ ಮಿನುಗಲು ವೇದಿಕೆ ಬೇಕು, ರಾತ್ರಿ ಹೆಗಲೆನ್ನದೆ ಪರಿಶ್ರಮ ಪಟ್ಟು ಎಲ್ಲರಿಗಿಂತ ವಿಭಿನ್ನವಾಗಿ ತಾವೇನು ಅಂತ ತೋರಿಸಿಕೊಳ್ಳುವುದಕ್ಕೆ ವೇದಿಕೆಯನ್ನು ಹುಡುಕುತ್ತಿದ್ದಾರೆ. ಹಾಗೆ ವೇದಿಕೆಯ ಮೇಲೇರಿ ಪ್ರತಿಭಾ ಪ್...

ಒಂದು ಒಳ್ಳೆಯ ನುಡಿ - 310

ಬರಹಗಾರರ ಬಳಗ ಜನ ೦೬ ಲೇಖನ ೭ ವೀಕ್ಷಣೆ

ಕ್ಯಾಲೆಂಡರ್ ದಶಂಬರ ೩೧ ತೋರಿಸುತ್ತಿರಬಹುದು. ಆದರೆ ನಮಗೆಲ್ಲ ಹೊಸವರುಷ ಇದಲ್ಲ. ಸಾಮಾನ್ಯವಾಗಿ ಮಾತಿಗೆ ಹೊಸವರುಷ ಹರುಷ ತರಲಿ ಹೇಳುವುದು ರೂಢಿ. ದಶಂಬರ ೩೧ ಎನ್ನುವುದು ಆ ತಿಂಗಳ ೨೦೨೫ ವರ್ಷದ ಕೊನೇ ದಿನ. ಈ ವರ್ಷದುದ್ದಕ್ಕ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಜನ ೦೬ ಕವನ ೪ ವೀಕ್ಷಣೆ

ಕಚ್ಚಾಡದಿರು ಯೋಗ್ಯತೆಯೇ ಇಲ್ಲದೆ ಪ್ರಶಸ್ತಿಗಾಗಿ ! * ನನ್ನಿಂದಾಗಿಯೆ ಕವಿಯು ಬೆಳಗಿದ ಭ್ರಮೆಯು ತಿಳಿ ! * ಹೊಲಸೊಂದಿಗೆ ಗುದ್ದಾಟ ಸಲ್ಲದಯ್ಯ ದೂರದಲ್ಲಿರು ! * ಯತಿಯಿರದ ಕಾವ್ಯವದು ಸಪ್ಪೆ ಸಾರಿನಂತಯ್ಯಾ...